ಬಚ್ಚನಾಯಕ ದೈವದ ಕನ್ನಡ ಭಕ್ತಿಗೀತೆ “ಭಕ್ತಪ್ರಿಯ ಬಚ್ಚನಾಯಕ” ಬಿಡುಗಡೆ

0

ಕಾರ್ಣಿಕ ಮೆರೆವ ದೈವಗಳಲ್ಲಿ ಯೇನೆಕಲ್ಲಿನ ಶ್ರೀ ಬಚ್ಚನಾಯಕ ದೈವ ಕೂಡ ಒಂದು. ಶ್ರೀ ಬಚ್ಚನಾಯಕ ದೈವದ ಕನ್ನಡ ಭಕ್ತಿಗೀತೆ “ಭಕ್ತಪ್ರಿಯ ಬಚ್ಚನಾಯಕ” ಮಾರ್ಚ್ 31 ರಂದು ಬಿಡುಗಡೆಗೊಂಡಿತ್ತು. ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಶ್ರೀ ಬಚ್ಚನಾಯಕ ದೈವಸ್ಥಾನದ ಜಾತ್ರೋತ್ಸವ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಬಾನಡ್ಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಹೇಶ್ ನಾಳ, ವಿನಯ ನೆಕ್ರಾಜೆ, ಲೋಕೇಶ್ ಕಲ್ಲೇರಿ, ಲಕ್ಷ್ಮಣ ಸಂಕಡ್ಕ, ಜಗದೀಶ ಸಂಕಡ್ಕ, ಅಭಿನಂದನ್ ಗೊರಸಿನಮನೆ, ಧನಂಜಯ ಕಡ್ಲಾರು ಮತ್ತು ಸಾಹಿತ್ಯ ನಿರ್ವಹಣೆ ಮಾಡಿದ ನಿರಂಜನ್ ಕಡ್ಲಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಧೀರ್ ಮಾದನಮನೆ ಕಾರ್ಯಕ್ರಮವನ್ನು ನಿರೂಪಿಸಿದರು.


ಈ ಭಕ್ತಿಗೀತೆಗೆ ನಿರಂಜನ್ ಕಡ್ಲಾರು ರವರ ಸಾಹಿತ್ಯ ಮತ್ತು ನಿರ್ವಹಣೆಯೊಂದಿಗೆ ವಿನೋದ್ ಆಚಾರ್ಯ ಪುತ್ತೂರು ರವರು ಹಾಡಿರುತ್ತಾರೆ. ಶಿವಪ್ರಿಯ ಆಚಾರ್ಯ ಬದಿಯಡ್ಕ ರವರ ಸಹಗಾಯನ, ಶರತ್ ಬಿಳಿನೆಲೆಯವರ ಸಂಗೀತ, ಇಂದೂಧರ ಹಳೆಯ ಅಂಗಡಿ ರವರ ಸಂಕಲನ, ಮಿಥುನ್ ರಾಜ್ ವಿದ್ಯಾಪುರ ರವರ ಸ್ಟುಡಿಯೋ ಚಿತ್ರೀಕರಣ ದೊಂದಿಗೆ ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ನ ರೆಕಾರ್ಡಿಂಗ್ ಮತ್ತು ಮಾಸ್ಟರ್ ರಿಂಗ್ ಇದೆ.