ಕುಕ್ಕೆ ಸುಬ್ರಹ್ಮಣ್ಯದ ಬಿಲದ್ವಾರದಲ್ಲಿರುವ ಪುಷ್ಪೋದ್ಯಾನ ವನ ಮತ್ತೆ ಸಾರ್ವಜನಿಕರಿಗೆ ತೆರೆದುಕೊಳ್ಳ ಬೇಕೆಂದು ಸಾರ್ವಜನಿಕರು ಭೇಡಿಕೆ ಇಟ್ಟಿದ್ದಾರೆ.

ಕಳೆದೊಂದು ವರ್ಷಕ್ಕೂ ಅಧಿಕ ದಿನಗಳಿಂದ ಇಲ್ಲಿನ ಪುಷ್ಪೋದ್ಯಾನವನ್ನು ಸಾರ್ವಜನಿಕರಿಗೆ ಮುಚ್ಚಲಾಗಿದೆ. ಆದಿ ಸುಬ್ರಹ್ಮಣ್ಯದಲ್ಲಿ ಒಂದು ಪಾರ್ಕ್ ಇದೆ. ಅದು ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆಯಾದರೂ ಬಿಲದ್ವಾರದ ಪುಷ್ಪೋದ್ಯಾನ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿಲ್ಲ.
ಇಲ್ಲಿ ಕೆಲವೊಮ್ಮೆ ಭಕ್ತರು ಬೇಲಿ ಹಾರೊ ಪುಷ್ಪೋದ್ಯಾನ ದೊಳಗೆ ಹೋಗುವುದು ಕಂಡು ಬಂದಿದೆ.

ಪುಷ್ಪೋದ್ಯಾನ ಪಕ್ಕವೇ ಸುರಂಗ ಮಾದರಿಯ ಬಿಲದ್ವಾರ ಇದ್ದು ಇದರೊಳಗೆ ಬರೆ ಕಾಲಿನಲ್ಲಿ ಪ್ರವೇಶಿಸಲು ಮುಕ್ತ ಅವಕಾಸವಿದೆ. ಈ ಸುರಂಗದಂತಿರುವ ದ್ವಾರದೊಳಗೆ ಹೋದರೆ 50 ಮೀ ಸುರಂಗದಲ್ಲಿ ಹೋಗಿ ಮತ್ತೊಂದು ತುದಿಯಲ್ಲಿ ಮೇಲೆ ಬದಲಾಗುತ್ತದೆ.
.ಈ ಸಂಬಂಧ ಕಾರ್ಯನಿರ್ವಾಹಣಾಧಿಕಾರಿ ಅಯ್ಯಪ್ಪ ಸುತಗುಂಡಿ ಅವರನ್ನು ಸಂಪರ್ಕಿಸಿದಾಗ ಶೀಘ್ರವಾಗಿ ಬಿಲದ್ವಾರದ ಪುಷ್ಪೋದ್ಯಾನಕ್ಕೆ ಭದ್ರತಾ ಸಿಬ್ಬಂದಿ ನೇಮಕ ಮಾಡಿ ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
