ಶಾಂತಿನಗರ ಸ.ಉ.ಹಿ.ಪ್ರಾ.ಶಾಲೆಗೆ ನೂತನವಾಗಿ ನಿರ್ಮಿಸಲಾದ ಪ್ರವೇಶ ದ್ವಾರದ ಉದ್ಘಾಟನಾ ಕಾರ್ಯಕ್ರಮ ಏ 8 ರಂದು ನಡೆಯಿತು.
ಸ್ಥಳೀಯ ನ. ಪಂ ಸದಸ್ಯರಾದ ನಾರಾಯಣ ಹಾಗೂ ಹಿರಿಯರಾದ ಗೋಪಾಲ ಕೃಷ್ಣ ಭಟ್ ಹಾಗೂ ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಝಿರ್ ಶಾಂತಿ ನಗರ ರವರು ಉದ್ಘಾಟನೆ ನೆರವೇರಿಸಿದರು.















ಶಾಲೆಯಲ್ಲಿ 23 ವರ್ಷಗಳ ಕಾಲದಿಂದ ಸೇವೆ ಸಲ್ಲಿಸುತ್ತಿರುವ ದೈಹಿಕ ಶಿಕ್ಷಕ ರಘುನಾಥ ರೈ ರವರು ಈ ದ್ವಾರ ನಿರ್ಮಾಣ ಕಾರ್ಯದಲ್ಲಿ ಆರ್ಥಿಕ ವ್ಯವಸ್ಥೆಗೆ ಬಹಳ ಶ್ರಮ ವಹಿಸಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಶಿಕ್ಷಕರಾದ ಸುಂದರ್ ಕೇನಾಜೆ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗುರು ಪವಿತ್ರಾ ಹಾಗೂ ಶಾಲಾ ಶಿಕ್ಷಕ ವೃಂದ, ಎಸ್ಡಿಎಂಸಿ ಸಮಿತಿ ಸದಸ್ಯರುಗಳು ಹಾಗೂ ಪೋಷಕರು, ವಿದ್ಯಾರ್ಥಿಗಳು, ಸ್ಥಳೀಯ ಅನೇಕ ಧಾನಿಗಳು ಉಪಸ್ಥಿತರಿದ್ದರು.










