ಜಯರಾಮ ಕೆ.ಆರ್ ( ಅಶೋಕ ) ನಿಧನ

0

ದ.ಕ ಸಂಪಾಜೆ ಗ್ರಾಮದ ಚೌಕಿ ನಿವಾಸಿ ಎಲ್ಲರಿಗೂ ಅಶೋಕ ಹೆಸರಿಂದ ಚಿರಪರಿಚಿತರಾಗಿದ್ದ ಜಯರಾಮ ಕೆ.ಆರ್ ಅಲ್ಪಕಾಲದ ಅಸೌಖ್ಯದಿಂದ ಕೆವಿಜಿ ಆಸ್ಪತ್ರೆಯಲ್ಲಿ ಏ.10 ರಂದು ರಾತ್ರಿ ನಿಧನರಾದರು.

ಅವರಿಗೆ 73 ವರ್ಷ ವಯಸ್ಸಾಗಿತ್ತು.

ಕೆಲವು ದಿನಗಳ ಹಿಂದೆ ಅಸೌಖ್ಯದಿಂದ ಬಳಲುತ್ತಿದ್ದು, ಕೆವಿಜಿ ಆಸ್ಪತ್ರೆಗೆ ದಾಖಲು ಪಡಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಮೃತರು ಪುತ್ರ ಶರತ್ ಕೀಲಾರು ಸಂಪಾಜೆ, ಸೊಸೆ ( ಸಂಪಾಜೆ ಗ್ರಾಂ.ಪಂ ಸದಸ್ಯೆ)ರಜನಿ ಶರತ್ , ಮೊಮ್ಮಕ್ಕಳು , ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.