ದ.ಕ.ಜಿಲ್ಲೆಯ ಸುಳ್ಯ ತಾಲೂಕಿನಿಂದ ಕೊಡಗಿನ ಕೊಯನಾಡು ಭಾಗಕ್ಕೆ ಸಂಪರ್ಕ ಕಲ್ಪಿಸುವ ಸುಳ್ಯ–ಕೊಯನಾಡು ಗ್ರಾಮಾಂತರ ಸಾರಿಗೆ ಬಸ್ ಗಳ ಕೊರತೆಯಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿದ್ದು, ಈ ಭಾಗದಲ್ಲಿರುವ ಏಕೈಕ ಸಾರಿಗೆ ವ್ಯವಸ್ಥೆ ಇದಾಗಿದ್ದು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಬಹುತೇಕರು ಇದೇ ಬಸ್ ಅನ್ನು ಅವಲಂಬಿಸಿದ್ದಾರೆ. ಕೆಲವು ಭಾಗದಲ್ಲಿ ಚಾಲಕರು ಬಸ್ ನಿಲುಗಡೆಯನ್ನು ಮಾಡದೇ ಪ್ರಯಾಣಿಕರನ್ನು ಕಡೆಗಣಿಸಲಾಗುತ್ತಿರುವುದರಿಂದ ಪುತ್ತೂರು ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಈ ಸಮಸ್ಯೆಗಳನ್ನು ಸರಿಪಡಿಸಲು ಸೂಚಿಸುವಂತೆ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ’ಸೋಜರವರಿಗೆ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕರವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಮನವಿಯನ್ನು ಮಾಡಲಾಯಿತು.















ಮನವಿಯನ್ನು ಪರಿಗಣಿಸಿ ಪುತ್ತೂರು ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿದ ಐವನ್ ಡಿ’ಸೋಜರವರು ಸುಳ್ಯ–ಕೊಯನಾಡು ಬಸ್ ಸಮಸ್ಯೆಗಳನ್ನು ಸರಿಪಡಿಸುವಂತೆ ಸೂಚಿಸಿದರು.
ಈ ಸಂದರ್ಭ ಉನೈಸ್ ಗೂನಡ್ಕ, ಎ.ಟಿ.ಹಸನ್, ಸಿದ್ದೀಕ್ ದೊಡ್ಡಡ್ಕ ಉಪಸ್ಥಿತರಿದ್ದರು.










