ಮೊಗರ್ಪಣೆ: ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಹಾಗೂ ಬ್ರಾಂಚ್ ಮದರಸಗಳ ಪ್ರಾರಂಭೋತ್ಸವ

0

ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ, ಜಯನಗರ ಜನ್ನತುಲ್ ಉಲೂಮ್ ಮದ್ರಸ ಶಾಂತಿನಗರ ನೂರುಲ್ ಇಸ್ಲಾಂ ಮದರಸ ಇದರ ಪ್ರಾರಂಭೋತ್ಸವ ಏಪ್ರಿಲ್ 16 ರಂದು ನಡೆಯಿತು.

ಪ್ರಾರಂಭೋತ್ಸವದ ಸಭಾ ಕಾರ್ಯಕ್ರಮವನ್ನು ಮೊಗರ್ಪಣೆ ಮೊಹಿಯದ್ದೀನ್ ಜುಮಾ ಮಸ್ಜಿದ್ ಇದರ ಮುದರ್ರಿಸ್ ಅಬ್ದುಲ್ ಖಾದರ್ ಸಕಾಫಿ ಅಲ್ ಖಾಮಿಲ್ ರವರು ದುವಾ ನೆರವೇರಿಸಿ ವಿದ್ಯಾರ್ಥಿಗಳಿಗೆ ಕುರಾನ್ ಅಕ್ಷರವನ್ನು ಹೇಳಿ ಕೊಡುವ ಮೂಲಕ ಉದ್ಘಾಟನೆಯನ್ನು ನಿರ್ವಹಿಸಿದರು.
ಸದರ್ ಮೊಅಲ್ಲಿಮ್ ಅಬ್ದುಲ್ ಕರೀಂ ಸಕಾಫಿ ರವರು ಪ್ರಾಸ್ತಾವಿಕ ಮಾತನಾಡಿ ನೂತನ ಶೈಕ್ಷಣಿಕ ಸಾಲಿನ ಕಾರ್ಯಯೋಜನೆಗಳ ಕುರಿತು ಶಿಕ್ಷಣದ ಕುರಿತು ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಜಮಾಅತ್ ಕಮಿಟಿ ಉಪಾಧ್ಯಕ್ಷ ಉಸ್ಮಾನ್ ಸಿ ಎಂ,ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ ಕೋಶಾಧಿಕಾರಿ ಮಹಮ್ಮದ್ ಆದರ್ಶ, ಕಟ್ಟಡ ಸಮಿತಿ ಸಂಚಾಲಕ ಹಾಜಿ ಅಬ್ದುಲ್ ಸಮದ್, ಮದರಸ ಅಧ್ಯಾಪಕರುಗಳಾದ ಹಂಝ ಸಖಾಫಿ, ಯೂಸುಫ್ ನಿಝಾಮಿ,ನಾಸಿರ್ ಸಖಾಫಿ, ಮೂಸಾ ಮುಸ್ಲಿಯಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಾರಂಭೋತ್ಸವ ದಲ್ಲಿ ಭಾಗವಹಿಸಿದ್ದರು.

ಜಯನಗರ ಮದರಸದಲ್ಲಿ ಸ್ಥಳೀಯ ಸದರ್ ಮೊಅಲ್ಲಿಮ್ ಶಫೀಕ್ ಹಿಮಮಿ, ಶಾಂತಿನಗರ ಮದ್ರಸದಲ್ಲಿ ಅಬ್ದುಲ್ ರಶೀದ್ ಝೖನಿ ದುವಾ ನೆರವೇರಿಸಿ ಕಾರ್ಯಕ್ರಮ ನಿರೂಪಿಸಿದರು.

ಸಮಿತಿಯ ಅಧ್ಯಕ್ಷ ಅಬ್ದುಲ್ಲಾ ಹಾಜಿ, ಕಾರ್ಯದರ್ಶಿ ಹಸೈನಾರ್ ಜಯನಗರ ಹಾಗೂ ಸಮಿತಿಯ ಸದಸ್ಯರುಗಳಾದ ಶಿಹಾಬ್, ರಫೀಕ್ ಹಾಗೂ ಪೋಷಕರು,ಶಾಂತಿನಗರ ಮದ್ರಸ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಗೂ ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.