ಬಡ್ಡಡ್ಕ ಅಮರ ಕ್ರೀಡಾ ಕಲಾ ಸಂಘದ ಆಯೋಜನೆಯ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

0

ಬಡ್ಡಡ್ಕ ಅಮರ ಕ್ರೀಡಾ ಮತ್ತು ಕಲಾ ಸಂಘದ ಬೆಳ್ಳಿ ಹಬ್ಬದ ಪ್ರಯುಕ್ತ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರವು ಎ. 14 ರಂದು ಸಮಾಪನಗೊಂಡಿತು.

ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಅಮರ ಕ್ರೀಡಾ ಕಲಾ ಸಂಘದ ಗೌರವಾಧ್ಯಕ್ಷ ಡಾ.ಜಯದೀಪ್ ಎನ್.ಎ ಅಧ್ಯಕ್ಷತೆ ವಹಿಸಿದ್ದರು.


ಸಂಘದ ಅಧ್ಯಕ್ಷ ಕಮಲಾಕ್ಷ ಬಡ್ಡಡ್ಕ,
ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಡಾ.ಜ್ಞಾನೇಶ್ ಎನ್ ಎ,ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ತೇಜಕುಮಾರ್ ಕೆ.ಆರ್,
ಬೆಳ್ಳಿ ಹಬ್ಬ ಸಮಿತಿಯ ಗೌರವಾಧ್ಯಕ್ಷ ಶಾಂತಾರಾಮ ಭಟ್ ಶಾಂತಮಂಗಲ,
ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷ ದಿನೇಶ್ ಬಡ್ಡಡ್ಕ, ಕಾರ್ಯದರ್ಶಿ ದಯಾನಂದ ಪತ್ತುಕುಂಜ,ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಚಂದ್ರ ಪಿ.ಕೆ,
ಆಲೆಟ್ಟಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಗಂಗಾಧರ ಬಡ್ಡಡ್ಕ,ಶಾಲೆಯ ಮುಖ್ಯ ಶಿಕ್ಷಕ ರಾಧಾಕೃಷ್ಣ ಕೆ,
ಶಿಬಿರದ ಸಂಯೋಜಕ ದೇವಿಪ್ರಸಾದ್ ಕಾಯರ್ತೋಡಿ ಉಪಸ್ಥಿತರಿದ್ದರು.


ಸಂಘದ ಸದಸ್ಯ ರಂಜಿತ್ ಬಡ್ಡಡ್ಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ದೇವಿಪ್ರಸಾದ್ ಕಾಯರ್ತೋಡಿ ಯವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಸಂಘದ ನಿ.ಪೂ ಅಧ್ಯಕ್ಷ ದೇವಿಪ್ರಸಾದ್ ಬಡ್ಡಡ್ಕ ವಂದಿಸಿದರು. ಕಾರ್ಯದರ್ಶಿ ಸನತ್ ಚಳ್ಳಂಗಾರ್ ಕಾರ್ಯಕ್ರಮ ನಿರೂಪಿಸಿದರು.