ಅರಂಬೂರು ಬಳಿ ಕಾರೊಂದು ಬೈಕಿಗೆ ಗುದ್ದಿ ಪರಾರಿಯಾದ ಘಟನೆ ಏ. 23 ರಂದು ರಾತ್ರಿ 11 ಗಂಟೆಗೆ ನಡೆದಿದೆ.















ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಕಾರು ಗುದ್ದಿದ್ದು ಘಟನೆ ಯಿಂದ ಬೈಕ್ ನಲ್ಲಿದ್ದ ಇಬ್ಬರು ಸವಾರರ ಕಾಲಿಗೆ ಗಾಯವಾಗಿದೆ.
ಅವರಲ್ಲಿ ಓರ್ವರ ಕಾಲಿಗೆ ಗಾಯ ಹೆಚ್ಚು ಆಗಿದ್ದ ಕಾರಣ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಬೈಕ್ ಸವಾರರು ಮರ್ಕಂಜ ನಿವಾಸಿಗಳು ಎಂದು ತಿಳಿದುಬಂದಿದ್ದು ಹೆಚ್ಚಿನ ವಿವರ ಇನ್ನು ತಿಳಿಯಬೇಕಾಗಿದೆ.










