ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಜಾತ್ರೆ

0

ಇಂದು ದರ್ಶನ ಬಲಿ ಉತ್ಸವ – ಬಟ್ಟಲು ಕಾಣಿಕೆ

ಎ.25 (ನಾಳೆ) ರಂದು ಉಳ್ಳಾಕುಲು ದೈವದ ಅಡ್ಡಣ ಪೆಟ್ಟು ಉತ್ಸವ

ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಎ.22ರಿಂದ ಆರಂ ಭಗೊಂಡಿದ್ದು, ಎ.24ರಂದು ದೊಡ್ಡ ದರ್ಶನ ಬಲಿ ಉತ್ವ, ಬಟ್ಟಲು ಕಾಣಿಕೆ ನಡೆಯುವುದು.

ಎ.24 ರಂದು ಪೂರ್ವಾಹ್ನ ದೇವರ ದರ್ಶನ ಬಲಿ ಉತ್ಸವ ನಡೆದು ರಾಜಾಂಗಣ ಪ್ರಸಾದ ಬಟ್ಟಲು ಕಾಣಿಕೆ) ವಿತರಣೆ, ಮಂತ್ರಾಕ್ಷತೆ ನಡೆಯುವುದು, ಸಂಜೆ ಆಹ್ವಾನಿತ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಕ್ಷೇತ್ರದಲ್ಲಿ ನಡೆ ಯುವುದು.

ಎ.25ರಂದು ಬೆಳಗ್ಗೆ7 ಗಂಟೆಯಿಂದ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯುವುದು. 8.30ರಿಂದ ದೈವದ ಅಡ್ಡಣ ಪೆಟ್ಟು ಉತ್ಸವ ಸಿರಿಮುಡಿ ಪ್ರಸಾದ ವಿತರಣೆ ನಡೆಯುವುದು.
ಬಳಿಕ
ಧೂಮಾವತಿ ಮತ್ತು ರುದ್ರಚಾಮುಂಡಿ ದೈವದ ನೇಮೋತ್ಸವ ನಂತರ ಪ್ರಸಾದ ವಿತರಣೆ, ಸಂಜೆ ಉಳ್ಳಾಕುಲು ಭಂಡಾರ ಕಚೇರಿಗೆ ಹಿಂತಿರುಗುವುದು. ಸಂಜೆ ವಿಷ್ಣುಮೂರ್ತಿ ದೈವಸ್ಥಾನ ಕಣೆ ಮರಡ್ಯದಿಂದ ದೈವದ ಭಂಡಾರ ತರುವುದು ರಾತ್ರಿ ವಿಷ್ಣುಮೂರ್ತಿ ದೈವದ ತೊಡಂಬಲ್ ನಡೆಯುವುದು, ಎ.26ರಂದು ಪೂರ್ವಾಹ್ನ ವಿಷ್ಣುಮೂರ್ತಿ ದೈವದ ನಡಾವಳಿಯ ಬಳಿಕ ಪ್ರಸಾದ ವಿತರಣೆಯಾಗುವುದು. ಅಪರಾಹ್ನ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಕಣೆಮರಡ್ಕಕ್ಕೆ ಹಿಂತಿರುಗುವ ಮೂಲಕ ಈ ವರ್ಷದ ಜಾತ್ರ ಕಾರ್ಯಗಳು ಸಂಪನ್ನಗೊಳ್ಳುವುದು, ಜಾತ್ರೋತ್ಸವದ ಪ್ರಯುಕ್ತ ಪ್ರತೀ ದಿನ ಅನ್ನಸಂತರ್ಪಣೆ ನಡೆಯುತ್ತದೆ.