ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಸ್ಥಳೀಯ ಮುಸ್ಲಿಂ ಮಹಿಳೆಯರಿಗೆ ಇಸ್ಲಾಮಿಕ್ ಸ್ಟಡಿ ಕ್ಲಾಸ್ ನಿಟ್ಟಿನಲ್ಲಿ ಇದರ ತರಬೇತಿ ಉದ್ಘಾಟನಾ ಕಾರ್ಯಕ್ರಮ ಏ. 23 ರಂದು ಮದ್ರಸ ಸಭಾಂಗಣ ದಲ್ಲಿ ನಡೆಯಿತು.
ಸ್ಥಳೀಯ ಮಸೀದಿ ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ರವರು ಪ್ರಾರ್ಥನೆ ನೆರವೇರಿಸಿ ಪ್ರಾಸ್ತವಿಕ ಮಾತನಾಡಿ ‘ಮಹಿಳೆಯರಿಗೆ ಇಸ್ಲಾಂ ನ ಆದರ್ಶ ತತ್ವಗಳ ಅರಿವು ನೀಡುವ ಮತ್ತು ಅದರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮೊಗರ್ಪಣೆ ನೂರುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸ ದ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ ರವರು ನೆರವೇರಿಸಿದರು.















ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀ ಫುಡ್ ವಹಿಸಿದ್ದರು.
ವೇದಿಕೆಯಲ್ಲಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ,ಉಪಾಧ್ಯಕ್ಷ ಸಿ ಎಂ ಉಸ್ಮಾನ್,ಕೋಶಾಧಿಕಾರಿ ಮಹಮ್ಮದ್ ಆದರ್ಶ, ಕಟ್ಟಡ ಸಮಿತಿ ಸಂಚಾಲಕ ಹಾಜಿ ಅಬ್ದುಲ್ ಸಮದ್, ಹಾಗೂ ಮದರಸ ಮುಅಲ್ಲಿಮರುಗಳು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಜಮಾಅತ್ ಸದಸ್ಯರುಗಳು, ಮುತಅಲ್ಲಿಂ ವಿದ್ಯಾರ್ಥಿ ಗಳು,ಮಹಿಳೆಯರು ಭಾಗವಹಿಸಿ ತರಗತಿಯ ಸದುಪಯೋಗ ಪಡೆದು ಕೊಂಡರು.
ಮುಂದಿನ ದಿನಗಳಲ್ಲಿ ವಾರದ ಒಂದು ದಿನ ಮಹಿಳೆ ಯಾರಿಗಾಗಿ ಇಸ್ಲಾಮಿಕ್ ಕ್ಲಾಸ್ ನಡೆಯಲಿರುವುದು ಎಂದು ಕಾರ್ಯದರ್ಶಿ ತಿಳಿಸಿ ದರು.










