














ನಮ್ಮಆರೋಗ್ಯಧಾಮ ಅಯ್ಯನಕಟ್ಟೆಯಲ್ಲಿ ಏ. 4ರಂದು ಬೆಳಿಗ್ಗೆ 10:30 ರಿಂದ 12:30 ರ ತನಕ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಸಂಪೂರ್ಣ ಆರೋಗ್ಯ ಮಾಹಿತಿ, ರಕ್ತ ಹೀನತೆ ತಪಾಸಣೆ ಮತ್ತು ಚಿಕಿತ್ಸೆ, ಜಂತು ಹುಳ ಸೋoಕಿಗೆ ಚಿಕಿತ್ಸೆ, ದಂತ ತಪಾಸಣೆ ಮತ್ತು ಚಿಕಿತ್ಸೆ, ಕಣ್ಣಿನ ದೃಷ್ಟಿ ದೋಷ ಪರೀಕ್ಷೆ, ಚರ್ಮದ ಸಮಸ್ಯೆಗೆ ಚಿಕಿತ್ಸೆ, ಮಕ್ಕಳ ಎತ್ತರ ಮತ್ತು ತೂಕ ತಪಾಸಣೆ ಮತ್ತು ಮಕ್ಕಳ ಬೆಳವಣಿಗೆಗೆ ಪೂರಕ ಔಷಧ ವಿತರಣೆ ಮಾಡಲಾಗುವುದು. ಮಕ್ಕಳ ತಜ್ಞ ವೈದ್ಯರಾದ
ಡಾ. ಮಧುಶ್ರೀ, ಬಾಯಿ ಮತ್ತು ಮುಖದ ತಜ್ಞರಾದ ಡಾ. ಶಮಾ ಮಜಲುಕರೆ, ಶಸ್ತ್ರಚಿಕಿತ್ಸಾ ತಜ್ಞರಾದ
ಡಾ. ಕಿಶನ್ ರಾವ್ ಬಾಳಿಲ ತಪಾಸಣೆಗೆ ಲಭ್ಯವಿರುವುದಾಗಿ ಡಾ. ಕಿಶನ್ ರಾವ್ ಬಾಳಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










