














ಅಂತರಾಷ್ಟ್ರ ಮಟ್ಟದ ಓಟದಲ್ಲಿ ಜಸ್ಮಿತಾ ಕೊಡೆಂಕಿರಿಗೆ 6ನೇ ಸ್ಥಾನ ಎಪ್ರಿಲ್ 27 ರಂದು ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರ ಮಟ್ಟದ ಟಿಸಿಎಸ್ 10 ಕಿ.ಮೀ ಓಟದಲ್ಲಿ ಜಸ್ಮಿತಾ ಕೊಡೆಂಕಿರಿಗೆ 6 ನೇ ಸ್ಥಾನ ದೊರಕಿದೆ.ಇದರಲ್ಲಿ ದೇಶ ವಿದೇಶಗಳಿಂದ ಸುಮಾರು 40,000 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಭಾರತದಲ್ಲಿ ನಡೆಯುವ ಪ್ರಮುಖ ಮ್ಯಾರಥಾನ್ ನಲ್ಲಿ ಇದು ಒಂದಾಗಿದೆ.ಇವರು ಬಳ್ಪ ಗ್ರಾಮದ ಕೊಡೆಂಕಿರಿ (ಕರ್ನಾಜೆ) ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.










