ಕೆ.ಎಂ.ಎಫ್ ನ ನೂತನ ನಿರ್ದೇಶಕರಾಗಿ ಚುನಾಯಿತರಾದ ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮ ಸಂಸ್ಕರಣಾ ಸಹಕಾರ ಸಂಘದ ನಿರ್ದೇಶಕ ಭರತ್ ನೆಕ್ರಾಜೆಯವರಿಗೆ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಏ. 29ರಂದು ನಡೆಯಿತು.
















ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮ ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಶುಭ ಹಾರೈಸಿದರು. ಸಂಘದ ನಿರ್ದೇಶಕರಾದ ಹೊನ್ನಪ್ಪ ಗೌಡ ಚಿರಕಲ್ಲು, ಲೋಕೇಶ್ವರ ಡಿ.ಆರ್, ಹರೀಶ್, ಕರುಣಾಕರ ಹೊಸಳ್ಳಿ, ನಾಗೇಶ್ ಪಿ.ಆರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಲಕ್ಷ್ಮೀ ಕೆ, ಲೆಕ್ಕಿಗ ಬಾಲಕೃಷ್ಣ ಎಸ್.ಎನ್ ಮತ್ತು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










