ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿಯಲ್ಲಿ ಶ್ರೀ ಬೆಟ್ಟುಮಕ್ಕಿಯಲ್ಲಿ ಶ್ರೀ ಶಿರಾಡಿ ಹಾಗೂ ಸಹ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಮೇ.
1 ರಿಂದ ಮೇ 3 ರಂದು ನಡೆಯಿತು









.
ಮೇ. 1 ರ ಸಂಜೆ ಬೆಟ್ಟುಮಕ್ಕಿಯಲ್ಲಿ ಗ್ರಾಮಸ್ಥರು ಸೇರಿ ಭಂಡಾರ ಹಿಡಿದು ಶಿರಾಡಿ ಬದಿ ಕಂಚಾರಕ್ಕೆ ಹೋಗಿ ತಂಬಿಲಾದಿ ಸೇವೆ ನಡೆಸಲಾಯಿತು. ಮೇ. 2 ರ ಬೆಳಗ್ಗೆ ನೇಮೋತ್ಸವ ನಡೆಯಿತು.

ಬಳಿಕ ಪರಿವಾರ ದೈವಗಳಾದ ಬ್ರಹ್ಮರು, ನುಗ್ಗೆ ಮಾದಿಮಾಳ್, ಮಣಿಗೋವಿಂದ, ಗಿಳಿರಾಮ, ಪೊಟ್ಟ, ಪೋರಂದಾಯ, ಪುರುಷ, ಕರಿನಾಯಕ, ಬೇಡವ, ಬಚ್ಚನಾಯಕ, ಮಣಿಪಂತ ಪಂಜುರ್ಲಿ, ಕಲ್ಲುರ್ಟಿ, ಕಲ್ಕುಡ, ಅಡಿಮಂತಾಯ ಹಾಗೂ ಕಟ್ಟೆಗುಳಿಗ ದೈವಗಳ ನೇಮೋತ್ಸವ ನಡೆಯಿತು. ಆ ಬಳಿಕ ಹರಕೆ ಕಾಣಿಕೆ ಒಪ್ಪಿಸುವ ಕಾರ್ಯಕ್ರಮ ನಡೆದು ಮಧ್ಯಾಹ್ನ ಗಗಡಿಗೆ ಹೋಗುವ ಕಾರ್ಯಕ್ರಮ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಆಡಳಿತ ಮಂಡಳಿಯ ಅಧ್ಯಕ್ಷ ವಸಂತ ಕಿರಿಭಾಗ, ಗೌರವಾಧ್ಯಕ್ಷ ಕೆ.ವಿ ಅಂಬಾದಾಸ್, ಕಾರ್ಯದರ್ಶಿ ಲೊಕೇಶ್ ಕಟ್ಟೆಮನೆ, ಖಜಾಂಜಿ ವಸಂತ ಮಚ್ಚಾರ, ಜತೆ ಕಾರ್ಯದರ್ಶಿ ಅಜೇಯ ಪಿ ಆಡಳಿತ ಮಂಡಳಿಯ ಸದಸ್ಯರು ಮತ್ತಿತರರು ಕಾರ್ಯಕ್ರಮ ಯಶಸ್ವಿಗೆ ದುಡಿದರು.










