ಆಲೆಟ್ಟಿ (ನಾರ್ಕೋಡು) ಸ.ಹಿ.ಪ್ರಾ.ಶಾಲೆಯ ಶತಮಾನೋತ್ಸವದ ಪೂರ್ವ ಭಾವಿ ಸಭೆ

0

ಶತಮಾನೋತ್ಸವದ ವರುಷದ ಕಾರ್ಯಕ್ರಮಕ್ಕೆ ಜು.13ರಂದು ಚಾಲನೆಗೆ ನಿರ್ಧಾರ

ಆಲೆಟ್ಟಿ ನಾರ್ಕೋಡು ದ.ಕ.ಜಿ.ಪಂ.ಸ.ಹಿ.ಪ್ರಾಥಮಿಕ ಶಾಲೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಿಸುವ ಸಲುವಾಗಿ ಪೂರ್ವ ಭಾವಿ ಸಭೆಯು ಮೇ.7 ರಂದು ಶಾಲೆಯ ಸಭಾಭವನದಲ್ಲಿ ನಡೆಯಿತು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ರೊ.ತೀರ್ಥಕುಮಾರ್ ಕುಂಚಡ್ಕ ರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಕೋಲ್ಚಾರು, ಪ್ರಧಾನ ಕಾರ್ಯದರ್ಶಿ ರೊ. ಗಿರೀಶ್ ನಾರ್ಕೋಡು, ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಚಂದ್ರ ಏಣಾವರ, ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದ, ಆರ್ಥಿಕ ಸಮಿತಿ ಸಂಚಾಲಕ ಜಯಪ್ರಕಾಶ್ ಕುಂಚಡ್ಕ, ಕೃಪಾಶಂಕರ ತುದಿಯಡ್ಕ, ಮುತ್ತಪ್ಪ ಪೂಜಾರಿ ಮೊರಂಗಲ್ಲು, ಸಂಚಾಲಕ ಚಂದ್ರಕಾಂತ ನಾರ್ಕೋಡು ಉಪಸ್ಥಿತರಿದ್ದರು.

ಶತಮಾನೋತ್ಸವದ ಅಂಗವಾಗಿ ಒಂದು ವರ್ಷದ ಕಾರ್ಯಕ್ರಮ ಹಮ್ಮಿಕೊಂಡು ಜುಲೈ ೧೩ ರಂದು ಕಂಪ್ಯೂಟರ್ ಕೊಠಡಿಯ ಉದ್ಘಾಟನೆಯೊಂದಿಗೆ ಚಾಲನೆ ನೀಡುವುದಾಗಿ ತೀರ್ಮಾನಿಸಲಾಯಿತು.

ಶತಮಾನೋತ್ಸವದ ಪ್ರಯುಕ್ತ ನೂತನ ಕಡ್ಟಡ ಮತ್ತು ರಂಗಮಂದಿರ ನಿರ್ಮಿಸುವ ಬಗ್ಗೆ ಹಾಗೂ ಕಟ್ಟಡದ ನೀಲಿ ನಕಾಶೆ ತಯಾರಿಸುವುದು. ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಪ್ರಕ್ರಿಯೆಯನ್ನು ಸಮಿತಿ ಪದಾಧಿಕಾರಿಗಳು ಜವಬ್ದಾರಿ ವಹಿಸಿಕೊಳ್ಳುವಂತೆ ನಿರ್ಧರಿಸಲಾಯಿತು. ಶತಮಾನೋತ್ಸವದ ಸವಿ ನೆನಪಿಗಾಗಿ ಸುಸಜ್ಜಿತ ಮೈದಾನ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳುವ ಸಲಹೆ ಸದಸ್ಯರು ನೀಡಿದರು.
ಸಂಚಾಲಕ ಚಂದ್ರಕಾಂತ ನಾರ್ಕೋಡು ರವರು ಕಾರ್ಯಕ್ರಮದ ವರದಿ ವಿವರ ನೀಡಿದರು.


ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಗಿರೀಶ್ ನಾರ್ಕೋಡು ವಂದಿಸಿದರು. ಕೋಶಾಧಿಕಾರಿ ರಾಮಚಂದ್ರ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು,ಪೋಷಕರು, ಶಿಕ್ಷಕರುಭಾಗವಹಿಸಿದರು.