ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಎಂಬ ಯೋಜನೆಯಡಿಯಲ್ಲಿ ಡಿ.ವೆಂಕಟರಮಣಯ್ಯರವರಿಗೆ ಆರ್ಥಿಕ ನೆರವು-ಚೆಕ್ ಹಸ್ತಾಂತರ

0

ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಎಂಬ ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ಮೇ.6 ರಂದು ಸುಳ್ಯ ಶಾಖೆಯಲ್ಲಿ ನಡೆಯಿತು. ಕ್ಯಾಂಪ್ಕೋ ಸಂಸ್ಥೆ ಸುಳ್ಯ ಶಾಖೆಯ ಸಕ್ರಿಯ ಸದಸ್ಯ ಡಿ .ವೆಂಕಟರಮಣಯ್ಯ ಇವರ ತೆರೆದ ಹೃದಯ ಶಸ್ತ್ರಕ್ರಿಯೆಗೆ ಸಹಾಯಧನದ ಮೊತ್ತ ರೂ.200,000/- (ರೂಪಾಯಿ ಎರಡು ಲಕ್ಷ ) ದ ಚೆಕ್ಕನ್ನು ಕ್ಯಾಂಪ್ಕೋ ಶಾಖೆಯ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ಶೆಟ್ಟಿ, ಯವರು ಡಿ ವೆಂಕಟರಮಣಯ್ಯ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಖೆಯ ಪ್ರಬಂಧಕರಾದ ಸಂತೋಷ್ ಪಿ, ಸೀನಿಯರ್ ಮ್ಯಾನೇಜರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.