ಆಪರೇಷನ್ ಸಿಂಧೂರ : ಕಾಯರ್ತೋಡಿ ದೇವಸ್ಥಾನದಲ್ಲಿ‌ ವಿಶೇಷ ಪ್ರಾರ್ಥನೆ

0

ಪಾಕ್ ಉಗ್ರ‌ ನೆಲೆಗಳ ಮೇಲೆ ಭಾರತದ ಸೇನೆ ಧಾಳಿ ನಡೆಸಿದ್ದು ದೇಶವೇ ಸಂಭ್ರಮಾಚರಣೆಯಲ್ಲಿದೆ. ದೇಶದ ಸೈನಿಕರಿಗೆ ಶ್ರೇಯಸ್ಸು ಲಭಿಸಬೇಕು ಹಾಗೂ ಭಯೋತ್ಪಾದನೆ ನಿರ್ಮೂಲನೆಗೊಳ್ಳಲಿ
ಎಂದು ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮೇ.8ರಂದು ಬೆಳಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ‌.ವೆಂಕಪ್ಪ ಗೌಡರ ಮುಂದಾಳತ್ವದಲ್ಲಿ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ವಿಠಲ ಸರ್ವೆಯರ್, ಜತ್ತಪ್ಪ ರೈ, ಶೃತಿ ಮಂಜುನಾಥ್, ಕುಸುಮಾವತಿ, ಪ್ರಮುಖರಾದ ಪಿ.ಸಿ. ಜಯರಾಮ್, ಪಿ.ಎಸ್.ಗಂಗಾಧರ್, ಧರ್ಮಪಾಲ ಕೊಯಿಂಗಾಜೆ, ಕಿಶನ್ ಜಬಳೆ, ನಿರಂಜನ ಬೊಳುಬೈಲು‌ ಮೊದಲಾದವರಿದ್ದರು.