ಸತೀಶ್ ಕೂಜುಗೋಡು ಮೇಲೆ ಮಿಥುನ್ ಕೂಜುಗೋಡು ಹಲ್ಲೆ: ಪೊಲೀಸ್ ದೂರು ದಾಖಲು

0

ಸುಳ್ಯ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸತೀಶ್ ಕೂಜುಗೋಡು ಅವರ ಮೇಲೆ ಮಿಥುನ್ ಕೂಜುಗೋಡು ಎಂಬವರು ಮೇ.6 ರಂದು ಹಲ್ಲೆ ನಡೆಸಿದ್ದು ಈ ಬಗ್ಗೆ ಸತೀಶ್ ರವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ವರದಿಯಾಗಿದೆ.

ಸತೀಶ್ ಕೂಜುಗೋಡು ಅವರು ರಾತ್ರಿ 9.30 ಕ್ಕೆ ಸುಬ್ರಹ್ಮಣ್ಯ ಕಡೆಯಿಂದ ಐನೆಕಿದು ಗ್ರಾಮದಲ್ಲಿರುವ ತನ್ನ ಮನೆ ಕಡೆಗೆ ಕಾರಲ್ಲಿ ತೆರಳುತ್ತಿದ್ದಾಗ ಐನೆಕಿದು ಶಾಲಾ ಬಳಿ ಮಿಥುನ್ ಕೂಜುಗೋಡು ಅವರು ಹಿಂದಿನಿಂದ ಕಾರಲ್ಲಿ ಬಂದು ಕಾರು ನಿಲ್ಲಿಸಲು ಹೇಳಿದರೆಂದೂ, ಸತೀಶರು ಕಾರು ನಿಲ್ಲಿಸಿದಾಗ ಮಿಥುನ್ ಅವರು ಏಕಾಏಕಿ ರಾಡ್ ನಿಂದ ತನ್ನ ತಲೆಗೆ ಹೊಡೆದುದಾಗಿಯೂ ಸತೀಶರುಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯ ಪರಿಣಾಮವಾಗಿ ಸತೀಶರ ತಲೆಗೆ ಗಾಯವಾಗಿದ್ದು ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆದು ಮೇ.7 ರಂದು ಮನೆಗೆ ವಾಪಸ್ಸಾಗಿದ್ದಾರೆ. ಲಾಡ್ಜ್ ಗೆ ಸಂಬಂಧಿಸಿದ ವ್ಯವಹಾರದಲ್ಲಿ ಮನಸ್ತಾಪ ಉಂಟಾಗಿ ಹಲ್ಲೆ ನಡೆಸಿರುವುದಾಗಿ ಹೇಳಲಾಗುತ್ತಿದೆ. ಮಿಥುನ್ ಕೂಜುಗೋಡು ರವರ ಮೇಲೆ ಕೇಸು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗಾಗಿ ಮಿಥುನ್ ಕೂಜುಗೋಡು ಸಂಪರ್ಕಕ್ಕೆಲಭ್ಯರಾಗಿಲ್ಲ