ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸುಮಾರು 31 ವರ್ಷಗಳ ಸುದೀರ್ಘ ಸೇವೆಗೈದು ಯಾವುದೇ ಅಪಘಾತ ಮಾಡದೇ ಪ್ರಶಸ್ತಿ ಪುರಸ್ಕೃತ ಚಾಲಕ ಮಹಮ್ಮದ್ ಕಲ್ಲುಗುಂಡಿ ಮೇ 8 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.









1994 ರಲ್ಲಿ ಚಾಲಕರಾಗಿ ಸೇರ್ಪಡೆ ಗೊಂಡು 2020 ರ ತನಕ 27 ವರ್ಷ ಮಡಿಕೇರಿಯಲ್ಲಿ ಚಾಲಕರಾಗಿ ಸೇವೆಸಲ್ಲಿಸಿ. 2020 ರಲ್ಲಿ ಸುಳ್ಯ ಡಿಪೋ ಚಾಲಕ ತರಬೇತುದಾರರಾಗಿ ಪದೋನ್ನತ್ತಿ ಪಡೆದು ಸುಳ್ಯಕ್ಕೆ ಬಂದರು.
ಚಾಲಕ ವೃತ್ತಿಯಲ್ಲಿ ಅಪಘಾತ ರಹಿತ ಚಾಲನೆಗೆ 2017 ರಲ್ಲಿ ರಜತ ಪದಕವನ್ನು ಪಡೆದರು, 2020 ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿದ್ದಾರೆ.
ಇವರ ಪ್ರಾಥಮಿಕ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಂಡಿ ಹಾಗೂ ಪ್ರೌಢ ಶಿಕ್ಷಣವನ್ನು ಸಂಪಾಜೆ ಹೈಸ್ಕೂಲ್ ನಲ್ಲಿ ಪೂರೈಸಿದರು.
ದಿ| ಕಡೆಪಾಲ ಅಬ್ದುಲ್ಲಾ ಹಾಗೂ ಮರಿಯಮ್ಮ ದಂಪತಿಗಳ ಪುತ್ರ ಇವರ ಪತ್ನಿ ಸಫಿಯಾ ಪುತ್ರ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಉದ್ಯೋಗಿ ಅಬ್ದುಲ್ ವಾಶಿಮ್ ರಾಜ್, ಇನ್ನೋರ್ವ ಪುತ್ರ ಬೆಂಗಳೂರಿನಲ್ಲಿ ಕಂಪೆನಿ ಉದ್ಯೋಗಿ ಅಬೂ ತಾಶಿಮ್ ರಾಜ್, ಹಾಗೂ ಪುತ್ರಿ ಆಯಿಶಾ ತಾಸ್ಮಿಯಾರವರೊಂದಿಗೆ ಪ್ರಸ್ತುತ ಸುಳ್ಯ ಗಾಂಧಿನಗರ ಬೀಜಕೊಚ್ಚಿಯಲ್ಲಿ ನೆಲೆಸಿದ್ದಾರೆ.










