ಭಕ್ತ ಆಡಿದ ಮಾತನ್ನು ನರಸಿಂಹ ದೇವರು ಸಾಧೃಷ್ಟ ಪಡಿಸಿದ, ಭಗವಂತನ ಕಂಡವರ ದಾರಿ ಪಾಲಿಸಿ: ಪೇಜಾವರ ವಿಶ್ವ ಪ್ರಸನ್ನ ಶ್ರೀ

ಭಕ್ತನಾಡಿದ ಮಾತು ಸತ್ಯ ಎನ್ನುವುದನ್ನು ನರಸಿಂಹ ದೇವರು ಸಾದೃಷ್ಟ ಪಡಿಸಿದ್ದಾನೆ. ಸದಾ ದೇವರು ಭಕ್ತನೊಂದಿಗಿರುವನು. ಮನುಷ್ಯ ಕಣ್ಣಿಗೆ ಕಾಣದ ದೇವರನ್ನು ಇದ್ದಾನೆ ಎಂದು ತಿಳಕೊಂಡು ನಂಬಿದ್ದೇವೆ ಎಂದರೆ ಕಣ್ಣಿಗೆ ಕಾಣದಿದ್ದರೂ ಎಲ್ಲಾ ಕಡೆ ದೇವರು ಇದ್ದಾನೆ ಅನ್ನುವುದು ಅಷ್ಟೇ ಸತ್ಯ. ಭಗವಂತನ ಕಾಣ ಬೇಕಾದರೆ ಭಕ್ತಿಯ ಮೂಲಕ ಭಗವಂತನ ಕಂಡವರ ದಾರಿ ಪಾಲಿಸಿ ಎಂದು ಪೇಜಾವರ ಅಧೋಕ್ಷಜ ಮಠ ಉಡುಪಿ ಯ ಶ್ರೀ ಶ್ರೀ ವಿಶ್ವ ಪ್ರಸನ್ನತೀರ್ಥ ನುಡಿದರು.ಅವರು
ಶ್ರೀ ಸಂಪುಟ ನರಸಿಂಹಸ್ವಾಮಿ ದೇವರ ನರಸಿಂಹ ಜಯಂತಿ ಅಂಗವಾಗಿ ನಡೆದ ಆನಂದತೀರ್ಥ ತತ್ವದರ್ಶಿನೀ ಸಭಾ
ಅನುಗ್ರಹ ಸಂದೇಶ ನೀಡುತ್ತಿದ್ದರು

ನರಸಿಂಹ ದೇವರು ದುಷ್ಟರನ್ನು ಶಿಕ್ಷಿಸುತ್ತಿದ್ದಾನೆ. ಎಂದ ಅವರು ಮಾನವ ಭಗವಂತನ ದೂರುತ್ತಾನೆ ಎಂದರೆ ಭಗವಂತನಿಗೆ ಅದರಿಂದ ಏನೂ ಆಗ ಬೇಕಾಗಿಲ್ಲ. ಅದರೆ ದೇವರು ಲೋಕದ ರಕ್ಷಣೆಗಾಗಿ ದುಷ್ಟರನ್ನು ದೂರಮಾಡುತ್ತಾನೆ ಎಂಬುದು ವಾಸ್ತವ ಸತ್ಯ ಎಂದರು.















ಸುಬ್ರಹ್ಮಣ್ಯ ಸ್ವಾಮಿ ಗೆ ಆರು ಮುಖ, ಆದರೆ ಹೃದಯ ಒಂದೇ. ಮನುಷ್ಯನೂ ಒಂದೆ ತೆರನಾದ ಹೃದಯವಂತಿಕೆ ಬೆಳೆಸಬೇಕು. ಅದರಿಂದ ಲೋಕಕ್ಕೆ ಒಳಿತಾಗಲಿದೆ ಎಂದರು.
ಆರಂಭದಲ್ಲಿ ಯತಿದ್ವಯರು ದೀಪ ಪ್ರಜ್ವಲನೆ ಮಾಡಿದರು. ಬಳಿಕ
ಡಾl ಶ್ರೀ ವಿದ್ಯಾಪ್ರಸನ್ನ ಶ್ರೀಗಳು ಅನುಗ್ರಹ ಸಂದೇಶ ನೀಡಿದರು.
ಬಳಿಕ ವಿದ್ವಾನ್ ಕಲ್ಲಾಪುರ ಪವಮಾನ ಆಚಾರ್ಯ ಅವರು “ನರಸಿಂಹ ಪ್ರಾದುರ್ಭಾವ ” ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಬೆಳಗ್ಗೆ ಶ್ರೀ ನರಸಿಂಹ ಜಯಂತಿ ನಡೆಯಿತು. ಬೆಳಗ್ಗೆ ಯಜ್ಞೇಶ್ ಆಚಾರ್ ಮತ್ತು ಬಳಗದವರಿಂದ ಭಕ್ತಿಿ ಸಂಗೀತ ನಡೆಯಿತು.










