ಮೆಸ್ಕಾಂನಲ್ಲಿ ಲೈನ್ ಮ್ಯಾನ್ ಕೊರತೆ ನೀಗಿಸಲು ಸಚಿವರಿಗೆ ಸಚಿನ್ ಮನವಿ

0

ಮೆಸ್ಕಾಂ ವ್ಯಾಪ್ತಿಯಲ್ಲಿ ಲೈನ್ ಮ್ಯಾನ್ ಕೊರತೆಯಿಂದ ಭೀಕರ ಮಳೆಯಿಂದ ವಿದ್ಯುತ್ ಸಮಸ್ಯೆ ನಿವಾರಣೆ ಅಸಾಧ್ಯ, ಸುಳ್ಯ ವಿಧಾನ ಸಭಾ ವ್ಯಾಪ್ತಿಯ ಮೆಸ್ಕಾಂ ಕಚೇರಿಯಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಣೆ ಮಾಡುವವರು ಹೆಚ್ಚಿನವರು ಹೊರ ಜಿಲ್ಲೆಯವರು, ಇದರಲ್ಲಿ ಕೆಲವರು ವರ್ಗಾವಣೆ ಮೂಲಕ ಹಾಗೂ ಡೆಪ್ಯೊಟೇಶನ್ ಮೂಲಕ ಅವರ ಊರಿಗೆ ತೆರಳಿದಾಗ ಇಲ್ಲಿ ಹುದ್ದೆ ಖಾಲಿ ಯಾಗಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ, ಇದಕ್ಕಾಗಿ ತಾತ್ಕಾಲಿಕ ಪರಿಹಾರ ಮಾಡಲು ಸರ್ಕಾರ ಗುತ್ತಿಗೆ ಆಧಾರದಲ್ಲಿ ಲೈನ್ ಮ್ಯಾನ್ ನೇಮಕ ಗೊಳಿಸಿ ಸಮಸ್ಯೆ ಪರಿಹಾರ ಮಾಡುವಂತೆ ಮತ್ತು ಡೆಪ್ಯೊಟೇಶನ್ ಲ್ಲಿ ಹೋದವರನ್ನು ಮರಳಿ ಮೊದಲಿದ್ದ ಸ್ಥಳದಲ್ಲಿ ಕೆಲಸ ನಿರ್ವಹಣೆ ಮಾಡುವಂತೆ ಮತ್ತು. ಮುಂದಿನ ನೇಮಕಾತಿ ಸಂದರ್ಭದಲ್ಲಿ ನೇಮಕಾತಿ ಗೊಂಡವರಿಗೆ 10 ವರುಷ ವರ್ಗಾವಣೆ ಅವಕಾಶ ನೀಡದಂತೆ ಆದೇಶ ಮಾಡಲು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾಜಿ ಅಧ್ಯಕ್ಷ ಸಚಿನ್ ರಾಜ್ ಶೆಟ್ಟಿ ಇಂಧನ ಸಚಿವರಿಗೆ ಮನವಿ ಮಾಡಿದ್ದಾರೆ.