ಬಳ್ಪ ಗ್ರಾಮದ ತೂಂಬಡ್ಕ ಶಿವರಾಮ ಭಟ್ ರವರು ಹೃದಯಾಘಾತದಿಂದ ಮೇ.30ರಂದು ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಶಿವರಾಮ ಭಟ್ ರವರು ಬೆಳಗ್ಗೆ ಮನೆಯಲ್ಲಿ ಉಪಹಾರ ಸೇವಿಸುತ್ತಿದ್ದ ಸಂದರ್ಭ ತೀವ್ರ ಅಸ್ವಸ್ಥಗೊಂಡು ಕುಳಿತಲ್ಲೇ ಕುಸಿದರೆನ್ನಲಾಗಿದೆ. ತಕ್ಷಣ ಅವರನ್ನು ಮನೆಯವರು ಪಂಜದ ಕ್ಲಿನಿಕ್ ಗೆ ಕರೆದುಕೊಂಡು ಬಂದು, ವೈದ್ಯರ ಸಲಹೆ ಮೇರೆಗೆ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಬಂದರು. ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರೆಂದು ತಿಳಿದುಬಂದಿದೆ.















ಕೃಷಿಕರಾಗಿದ್ದ ಶಿವರಾಮರು ಪಂಜ ಹವ್ಯಕ ವಲಯದ ಗುರಿಕ್ಕಾರ ರಾಗಿ ಸೇವೆ ಸಲ್ಲಿಸುತಿದ್ದರು.
ಮೃತರು ಪತ್ನಿ ಶ್ರೀಮತಿ ಕಾಂತಿ ಎಸ್.ಭಟ್, ಪುತ್ರಿ ಶ್ರೀಮತಿ ನಮೃತಾ, ಅಳಿಯ, ಸಹೋದರರು, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










