ಸುಬ್ರಹ್ಮಣ್ಯದ ಅನುಗ್ರಹ ಎಜುಕೇಶನ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷ ದಿವಂಗತ ಕುಮಾರ ನಾಯರ್ ಅವರ ಜನ್ಮದಿನದ ಅಂಗವಾಗಿ ಸ್ಥಾಪಕರ ದಿನಾಚರಣೆಯನ್ನು ಬ್ಲಡ್ ಸೆಂಟರ್ ಪುತ್ತೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಜೂ.3 ರಂದು ಏರ್ಪಡಿಸಲಾಗುವುದು.









ರಕ್ತದಾನ ಶಿಬಿರವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ ಇಂಜಾಡಿ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ವೈದ್ಯಾಧಿಕಾರಿ ಡಾ. ಕೆಪಿ ಸೀತಾರಾಮ್ ಭಟ್ ಸಂಸರಣ ಮಾತುಗಳನ್ನ ,ಸುಳ್ಯ ಸುದ್ದಿ ಬಿಡುಗಡೆಯ ಸಂಪಾದಕರಾದ ಹರೀಶ್ ಬಂಟ್ವಾಳ ನೆರವೇರಿಸಲಿರುವರು .ಗೌರವ ಉಪಸ್ಥಿತಿಯಲ್ಲಿ ಸುಬ್ರಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ನಡುತೋಟ ಉಪಸ್ಥಿತರಿರುವರೆಂದು ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ತಿಳಿಸಿರುತ್ತಾರೆ.










