ರಾಜ್ಯ ಹೆದ್ದಾರಿ ಸುಳ್ಯದ ಗಾಂಧಿನಗರದಲ್ಲಿ ನೀರಿನ ಪೈಪು ಲೈನ್ ಹಾಕಲು ಗುಂಡಿ ತೋಡಲಾಗಿದ್ದು ಪೈಪು ಲೈನ್ ಅಳವಡಿಸಿದ ನಂತರ ಅದನ್ನು ಸಮರ್ಪಕವಾಗಿ
ಮುಚ್ಚಿ ಕಾಂಕ್ರೀಟ್ ಮಾಡದಿರುವುದರಿಂದ ಇದೀಗ ಮಳೆ ಬಂದು ಹೊಂಡದಲ್ಲಿ ನೀರು ನಿಂತು ವಾಹನ ಸವಾರರು ಅರಿವಿಲ್ಲದೆ ಬಂದು ಹೊಂಡಕ್ಕೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯನ್ನು ಅಡ್ಡಲಾಗಿ ಕಡಿದು ಪೈಪು ಲೈನ್ ಹಾಕಲಾಗಿತ್ತು. ಬಳಿಕ ಮುಚ್ಚುವ ಕಾರ್ಯವನ್ನು ಸರಿಯಾಗಿ ಮಾಡದೆ ಬಿಟ್ಟುಹೋಗಿರುವುದರಿಂದ ಇದೀಗ ವಾಹನ ಸವಾರರು ನರಕ ಯಾತನೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
















ನಿರಂತರ ವಾಹನಗಳು ಓಡಾಡುವ ಹೆದ್ದಾರಿಯಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದ್ದು ಜನಪ್ರತಿನಿಧಿಗಳು ಕಂಡು ಕಾಣದಂತೆ ಸುಮ್ಮನಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಗರಾಡಳಿತವಾದರೂ ಎಚ್ಚೆತ್ತುಕೊಂಡು ಶೀಘ್ರವಾಗಿ ಹೊಂಡವನ್ನು ಮುಚ್ಚುವ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿರುತ್ತಾರೆ.










