ಸುಳ್ಯ ಎನ್ನೆoಪಿಯುಸಿಯಲ್ಲಿ “ಪರಿಸರ ದಿನಾಚರಣೆ”ಯ ಅಂಗವಾಗಿ ಕಸಿಕಟ್ಟುವಿಕೆ ಕಾರ್ಯಕ್ರಮ

0


ಪರಿಸರ ಭೂಮಿಯ ಮೇಲಿನ ಅಮೂಲ್ಯ ಸಂಪತ್ತು. ನಾವು ಉಸಿರಾಡುವ ಜಗತ್ತು ಹಸಿರಿನಿಂದ ಕೂಡಿರಬೇಕು. ಪರಿಸರದ ಒಡನಾಡಿಗಳು ನಾವು ಎಂದು
ಸುಳ್ಯ ಎನ್ನೆoಸಿಯ ಸಸ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಕುಲದೀಪ್ ಪೆಲ್ತಡ್ಕ ತಿಳಿಸಿದರು.

ಅವರು ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ವಿಜ್ಞಾನ ಸಂಘದ ವತಿಯಿಂದ ಪರಿಸರ ದಿನದ ಅಂಗವಾಗಿ ನಡೆದ ಗಿಡಗಳ ಕಸಿಕಟ್ಟುವಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.ಹಾಗೂ ಕಸಿಕಟ್ಟುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ನಡೆಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾoಶುಪಾಲರಾದ ಮಿಥಾಲಿ ಪಿ ರೈ ಅವರು ವಹಿಸಿ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮ ಗುರಿಯಾಗಬೇಕು,ಗಿಡ ಕಸಿಕಟ್ಟುವಿಕೆಯನ್ನು ನಾವೆಲ್ಲರೂ ಕಲಿಯಬೇಕು ಇದು ಉಪಯುಕ್ತ ಕಾರ್ಯಕ್ರಮ ಎಂದರು.


ಕಾರ್ಯಕ್ರಮ ಸಂಯೋಜಕರಾದ ಜೀವ ಶಾಸ್ತ್ರ ಉಪನ್ಯಾಸಕ ರಕ್ಷಿತ್ ಬಿ. ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ ಬಿ, ಬೋಧಕ,ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.