ಆಲೆಟ್ಟಿ ಸರಕಾರಿ ಪ್ರೌಢಶಾಲೆಯ ಮಂತ್ರಿ ಮಂಡಲ ರಚನೆಯಾಗಿದ್ದು
ಪದಗ್ರಹಣ ಸಮಾರಂಭ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ಜೂ.21 ರಂದು ನಡೆಯಿತು.















ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯಪರಿಷತ್ತಿನ ಹೋಬಳಿಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಕೆ.ಪಿ.ಎಸ್ ಗಾಂಧಿನಗರ ಪ್ರೌಢಶಾಲಾ ಶಿಕ್ಷಕ ಚಿನ್ನಪ್ಪ ಗೌಡ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಶಾಲಾ ನಾಯಕ ಭವನ್ ಕೆ.ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಂದರ್ ಭಾರತ್ ಟ್ರಸ್ಟ್ ವತಿಯಿಂದವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ಸುಳ್ಯ ಸಾಹಿತ್ಯಪರಿಷತ್ ಘಟಕದ ವತಿಯಿಂದ ಶಾಲಾ ಕನ್ನಡ ಸಂಘದ ಕಾರ್ಯಚಟುವಟಿಕೆಗಳಿಗೆ ಪೂರಕವಾಗುವಂತೆ ಕಿಟ್ ವಿತರಿಸಲಾಯಿತು.
ಕು. ವಂಶಿ ಸ್ವಾಗತಿಸಿ,
ಕು. ಚರಿಷ್ಮಾ ಕೆ. ಜೆ ವಂದಿಸಿದರು.ಕು. ಆತ್ಮಿಕಾ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕ ವೃಂದದವರು, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.










