
ರಂಗೋಲಿ ಟೈಲರಿಂಗ್ ಸಂಸ್ಥೆಯ ಮಾಲಕರಾದ ಪ್ರಶಾಂತಿ ಬಡ್ಡಡ್ಕ
ಮತ್ತು ಸ್ಪಂದನ ಜುವೆಲ್ಲರಿಯ ಮಾಲಕರಾದ ಸಂಜೀವ ಅವರ
ಮಾಲಕತ್ವದಲ್ಲಿ ಸುಳ್ಯದ ಚೆನ್ನಕೇಶವ ವಾಣಿಜ್ಯ ಸಂಕೀರ್ಣದಲ್ಲಿ ರಂಗೋಲಿ ಲಾಂಡ್ರಿ ಸರ್ವಿಸಸ್ ಇತ್ತೀಚೆಗೆ ಶುಭಾರಂಭಗೊಂಡು ಗ್ರಾಹಕರಿಗೆ ಸೇವೆ ನೀಡುತ್ತಿದೆ. ಸುಳ್ಯದ ಹೃದಯಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ರಂಗೋಲಿ ಲಾಂಡ್ರಿ ಸರ್ವಿಸಸ್ ನೂತನ ಸಂಸ್ಥೆಯಲ್ಲಿ ಹೊಸ ವಿನ್ಯಾಸದ ಆಧುನಿಕ ಯಂತ್ರೋಪಕರಣಗಳ ಮೂಲಕ ಬಟ್ಟೆಗಳ ವಾಶ್, ಡ್ರೈವಾಶ್, ಐರನ್ ಕ್ಲಪ್ತ ಸಮಯದಲ್ಲಿ ಸ್ಪರ್ಧಾತ್ಮಕ ದರದಲ್ಲಿ ಮಾಡಿಕೊಡಲಾಗುತ್ತಿದೆ.
















ಪ್ರಶಾಂತಿ ಬಡ್ಡಡ್ಕರವರು ಶ್ರೀ ಚೆನ್ನಕೇಶವ ವಾಣಿಜ್ಯ ಸಂಕೀರ್ಣದಲ್ಲಿ ಸುಮಾರು 20 ವರ್ಷಗಳ ಹಿಂದೆ ಆರಂಭಿಸಿದ ರಂಗೋಲಿ ಗಾರ್ಮೆಂಟ್ಸ್, ಟೈಲರಿಂಗ್ ಮತ್ತು ಎಂಬ್ರಾಯಿಡರಿ ಸಂಸ್ಥೆಯ ಮೂಲಕ
ಮಹಿಳೆಯರ ಡ್ರೆಸ್ ಸ್ವಿಚಿಂಗ್ ಸಂಸ್ಥೆಯಾಗಿ ಸುಳ್ಯದಲ್ಲಿ ಜನಪ್ರಿಯತೆಯೊಂದಿಗೆ ಬೆಳೆದುಬಂದಿದ್ದಾರೆ. ಹೆಣ್ಣುಮಕ್ಕಳ, ಯುವತಿಯರ, ಮಹಿಳೆಯರಿಗೆ ಮನಸ್ಸಿಗೆ ಒಪ್ಪುವ ಆಕರ್ಷಕ ಎಂಬ್ರಾಯಿಡರಿ ಸ್ಟಿಚ್ಚಂಗ್ ಇಲ್ಲಿ ಮಾಡಿ ಕೊಡಲಾಗುತ್ತದೆ. ಅಲ್ಲದೆ ಟಿಷರ್ಟ್ ಮತ್ತು ಬ್ಯಾಗ್‌ಗಳ ಮೇಲೆ ಚಿತ್ತಾಕರ್ಷಕ ಎಂಬ್ರಾಯಿಡರಿ
ಚಿತ್ರಗಳನ್ನು ಹಾಕಿ ಅಂದವಾಗಿ ತಯಾರಿಸಿ ಕೊಡುತ್ತಾರೆ. ಟಿಷರ್ಟ್ ಮತ್ತು ಬ್ಯಾಗ್‌ಗಳ ಮೇಲೆ ಎಂಬ್ರಾಯಿಡರಿ ಸ್ಟಿಚ್ಚಿಂಗ್
ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ತರಲು ಸಿದ್ಧತೆ
ನಡೆಸುತ್ತಿದ್ದಾರೆ ರಂಗೋಲಿಯ ಮಾಲಕರಾದ ಪ್ರಶಾಂತಿ ಬಡ್ಡಡ್ಕ.











