ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೈಕ್ ಸವಾರನಿಗೆ ಜಖಂ

0

ಗಾಯಗೊಂಡ ಪೆರಾಜೆ ಪೋಸ್ಟ್ ಮಾಸ್ಟರ್ ಪುತ್ತೂರು ಆಸ್ಪತ್ರೆಗೆ ಸ್ಥಳಾಂತರ

ಪೆರಾಜೆ ಅಂಚೆ ಕಚೇರಿಯಲ್ಲಿ ಅಂಚೆಪಾಲಕರಾಗಿರುವ ಸುಮಂತ್ ಎಂಬವರು ಇಂದು ಬೆಳಿಗ್ಗೆ ಬೆಳ್ಳಾರೆಯಿಂದ ಪೆರಾಜೆಗೆ ಬರುತ್ತಿರುವಾಗ ಐವರ್ನಾಡು ಬಳಿ ವಿದ್ಯುತ್ ತಂತಿ ತುಂಡಾಗಿ ಬೈಕ್‌ನ ಮೇಲೆ ಬಿದ್ದ ಪರಿಣಾಮವಾಗಿ ಬಿದ್ದು ಜಖಂಗೊಂಡ ಘಟನೆ ವರದಿಯಾಗಿದೆ.


ತುಂಡಾಗಿ ಬಿದ್ದ ವಿದ್ಯುತ್ ತಂತಿ ಬೈಕ್‌ನ ಕನ್ನಡಿಗೆ ಸಿಕ್ಕಿಕೊಂಡು ಬೈಕ್ ನಿಯಂತ್ರ ತಪ್ಪಿ ಮಗುಚಿ ಬಿತ್ತೆಂದೂ, ಬೈಕ್ ಸವಾರ ಸುಮಂತ್‌ರ ಮೊಣಕಾಲಿಗೆ ತೀವ್ರ ಜಖಂ ಆಯಿತೆಂದೂ ತಿಳಿದು ಬಂದಿದ್ದು, ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಯಿಂದ ಪುತ್ತೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.