ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಹಾಗೂ ಶ್ರೀ ಮಂಜುನಾಥೇಶ್ವರ ವಲಯ ಭಜನಾ ಪರಿಷತ್ ನ ಸಭೆಯನ್ನು ವಲಯ ಭಜನಾ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ರವರ ಅಧ್ಯಕ್ಷತೆಯಲ್ಲಿ ಅಜ್ಜಾವರ ಮಹಿಷಮರ್ಧಿನಿ ವೇದಪಾಠ ಶಾಲಾ ಆವರಣದಲ್ಲಿ ನಡೆಸಲಾಯಿತು.
ಈ ಸಭೆಯನ್ನು ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷರಾದ ಸೋಮಶೇಖರ ಪೈಕ ಕಾರ್ಯಕ್ರಮ ಉದ್ಘಾಟಿಸಿದರು.

ಸುಳ್ಯ ತಾಲೂಕಿನ ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ ಮಾತನಾಡಿದರು.
ತಾಲೂಕಿನ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ಕಾರ್ಯದರ್ಶಿ ಯವರಾದ ಟಿ.ಎನ್. ಸತೀಶ್, ಮಹಿಳಾ ಭಜನಾ ಪರಿಷತ್ ಕಾರ್ಯದರ್ಶಿ ವಿಶಾಲ ಸೀತಾರಾಮ, ವಲಯ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ತಾಲೂಕು ಭಜನ ಪರಿಷತ್ ಉಪಾಧ್ಯಕ್ಷರಾದ ಶ್ರೀಮತಿ ಸಂಧ್ಯಾ ಮಂಡೆಕೋಲು ಉಪಸ್ಥಿತರಿದ್ದರು.








ಈ ಸಂದರ್ಭದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವಲಯ ಪದಾಧಿಕಾರಿಗಳ ಸಮಿತಿ ರಚನೆಯನ್ನು ಮಾಡಲಾಯಿತು.

ಭಜನಾ ಪರಿಷತ್ ನ ವಲಯ ನೂತನ ಅಧ್ಯಕ್ಷರಾಗಿ ಪ್ರಕಾಶ್ ಕಣೆಮರಡ್ಕ
ವಲಯ ಉಪಾಧ್ಯಕ್ಷರಾಗಿ ಸೀತಾರಾಮ ಶಾಂತಿಮಾಜಲು
ವಲಯ ಕಾರ್ಯದರ್ಶಿಯವರಾಗಿ ಶ್ರೀಮತಿ ವಿಶಾಲ ಸೀತಾರಾಮ ಕರ್ಲ ಪ್ಪಾಡಿ
ಜತೆ ಕಾರ್ಯದರ್ಶಿಯಾಗಿ ವಸಂತ ಮಡಿವಾಳ ಮೂಳೆ ಕೋಶಾಧಿಕಾರಿಯಾಗಿ ಶ್ರೀಮತಿ ರಮ್ಯಾ ದೊಡ್ಡೇರಿ (ರೇವತಿ)
ಹಾಗೂ ವಲಯ ಭಜನಾ ಪರಿಷತ್ ಸದಸ್ಯರಾಗಿ ಚಂದ್ರಜಿತ್, ಕೃಷ್ಣ ಮಣಿಯಾಣಿ ಕನ್ಯಾನ, ಸುಂದರ ಅಜ್ಜಾವರ, ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಲಯ ಭಜನಾ ಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ವಲಯ ಭಜನಾ ಪರಿಷತ್ ನ ಪದಾಧಿಕಾರಿಗಳು, ಸೇವಾಪ್ರತಿನಿಧಿಯವರು ಭಾಗವಹಿಸಿದರು.
ಈ ಸಭೆಯಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ಕಾಂತಿಕಮಣಿ ನಿರೂಪಣೆ,
ಶ್ರೀಮತಿ ರಜನಿ ಆಡ್ಪಂಗಾಯ ರವರು ಸ್ವಾಗತಿಸಿ, ಮಂಡೆಕೋಲು ಸೇವಾಪ್ರತಿನಿಧಿ ಶ್ರೀಮತಿ ವೇದಾವತಿ ಧನ್ಯವಾದ ಅರ್ಪಿಸಿದರು.










