ದಾಸರಬೈಲು ಶಾಲೆಯ ನೂತನ ಎಸ್. ಡಿ. ಎಂ. ರಚನೆ

0

ಬೊಮ್ಮರು ಯುವತಿ ಮಂಡಲ ದ ವತಿಯಿಂದ ಉಚಿತ ನೋಟ್ ಬುಕ್ ವಿತರಣೆ

ಸ.ಕಿ.ಪ್ರಾ.ಶಾಲೆ ದಾಸರಬೈಲು ಶಾಲೆಯ ನೂತನ ಎಸ್.ಡಿ.ಎಮ್ ಸಿ ರಚನೆ ಮತ್ತು ಉಚಿತ ಬರೆಯುವ ಪುಸ್ತಕ ವಿತರಣಾ ಕಾರ್ಯಕ್ರಮ ಜೂ. 26ರಂದು ನಡೆಯಿತು.

ನಿಕಟ ಪೂರ್ವ ಅಧ್ಯಕ್ಷ ಪದ್ಮನಾಭ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ತ್ಯಾಗರಾಜ ಕೋಡಿ ಸರ್ವಾನುಮತದಿಂದ ಆಯ್ಕೆಯಾದರು. ನಿಯಮಾನುಸಾರ ರದ್ದಾಗಿರುವ 8 ಜನ ಸದಸ್ಯ ಸ್ಥಾನಕ್ಕೆ 8 ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಪದ್ಮನಾಭರಿಗೆ ಅಭಿನಂದನೆ ಸಲ್ಲಿಸಲಾಯಿತು.
ಶಿಕ್ಷಕಿ ಶುಭರವರು ಶಾಲಾಭಿವೃದ್ಧಿಗೆ ತೊಡಗಿಸಿಕೊಂಡ ಪದ್ಮನಾಭರಿಗೆ ಹಾಗೂ ಸಮಿತಿಗೆ ಅಭಿನಂದನೆ ಸಲ್ಲಿಸಿ ಸಹಕಾರ ನೀಡಿದ ಪೋಷಕರನ್ನ ನೆನಪಿಸಿಕೊಂಡರು. ಸಭೆಯಲ್ಲಿ ಬೊಮ್ಮಾರು ಯುವತಿ ಮಂಡಲದ ವತ ಯಿಂದ ನೀಡಿದ ಉಚಿತ ನೋಟ್ ಪುಸ್ತಕಗ ಲೇಖನಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಪ್ರಭಾರ ಮುಖ್ಯಗುರುಗಳಾದ ಬೆಳ್ಯಪ್ಪ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ವಂದಿಸಿದರು. ಎಲ್ಲಾ ಪೋಷಕರು, ಅತಿಥಿ ಶಿಕ್ಷಕಿಯರಾದ ಶ್ರೀಮತಿ ನಮಿತಾ ಶ್ರೀಮತಿ ವಿದ್ಯಾ ಉಪಸ್ಥಿತರಿದ್ದರು.