ಪಂಜ:ಜೇಸಿಐ ಪಂಜ ಪಂಚಶ್ರೀ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಮತ್ತು ಜೂನ್ ತಿಂಗಳ ಸದಸ್ಯರ ಹುಟ್ಟುಹಬ್ಬ ಆಚರಣೆ

0


ಜೇಸಿ ಐ ಪಂಜ ಪಂಚಶ್ರೀ ಪ್ರಾಂತ್ಯ ‘ಎಫ್’ ವಲಯ 15 ಆಶ್ರಯದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಮತ್ತು ಜೂನ್ ತಿಂಗಳ ಸದಸ್ಯರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮವು ಜೂ.30 ರಂದು ಪಂಜ ಲಯನ್ಸ್ ಕ್ಲಬ್ ಭವನದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ JFM ವಾಚಣ್ಣ ಕೆರೆಮೂಲೆ ವಹಿಸಿಕೊಂಡರು. ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಪುರಸ್ಕೃತರು 37 ಸಲ ರಕ್ತದಾನ ಮಾಡಿರುವ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಮತ್ತು ಯುವ ತೇಜಸ್ಸು ಟ್ರಸ್ಟ್ ಪಂಜ ಇದರ ಸಕ್ರಿಯ ಸದಸ್ಯ ಸುಜೀತ್ ಪಂಬೆತ್ತಾಡಿ ರವರನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ ಗೌರವಿಸಿದರು. ವೇದಿಕೆಯಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗ ವಲಯ ಸಂಯೋಜಕ ಜೇಸಿ ಚಂದ್ರಶೇಖರ್ ಕನಕಮಜಲು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯದರ್ಶಿ JFM ಅಶ್ವತ್ ಬಾಬ್ಲುಬೆಟ್ಟು ಕಾರ್ಯಕ್ರಮ ನಿರ್ದೇಶಕ JFM ಗಗನ್ ತೆಂಕಪಾಡಿ ಉಪಸ್ಥಿತರಿದ್ದರು.ಜೂನ್ ತಿಂಗಳ ಸದಸ್ಯರ ಹುಟ್ಟುಹಬ್ಬವನ್ನು ಹಣ್ಣಿನ ಗಿಡವನ್ನು ನೀಡುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜೇಸಿ ಸಚಿತ್ ಪೆರಿಯಪ್ಪು ವೇದಿಕೆಗೆ ಆಹ್ವಾನಿಸಿದರು. ಜೇಸಿ ವಾಣಿಯನ್ನು ಜೇಸಿ ಕುಸುಮಾಧರ ಕಕ್ಯಾನ ವಾಚಿಸಿದರು. ಪುರಸ್ಕೃತರ ಪರಿಚಯವನ್ನು JFM ಪ್ರವೀಣ ಕುಂಜತ್ತಾಡಿ ನೆರವೇರಿಸಿದರು. ಕಾರ್ಯದರ್ಶಿ ಜೇಸಿ ಅಶ್ವತ್ ಬಾಬ್ಲುಬೆಟ್ಟು ವಂದಿಸಿದರು.ಕಾರ್ಯಕ್ರಮದಲ್ಲಿ ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.