ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಕಾಲೇಜು ಮಂತ್ರಿಮಂಡಲದ ಉದ್ಘಾಟನಾ ಕಾರ್ಯಕ್ರಮ ನೇರವೇರಿತು.
ಮುಖ್ಯಅತಿಥಿಯಾಗಿ ಆಗಮಿಸಿದ ನೆಹರೂ ಮೆಮೊರಿಯಲ್ ಕಾಲೇಜು ಸುಳ್ಯ ಇಲ್ಲಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಮತಾ.ಕೆ ಇವರು ದೀಪ ಬೆಳಗಿಸಿ ಮಂತ್ರಿ ಮಂಡಲದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಚುನಾವಣೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ ವಿದ್ಯಾರ್ಥಿಗಳು ಚುನಾವಣೆಗಳ ಬಗ್ಗೆ ಅರಿತಾಗ ಉಜ್ವಲ ದೇಶ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.















ಕಾಲೇಜು ವಿಭಾಗದ ಪ್ರಧಾನ ಮಂತ್ರಿ ವರ್ಷ.ಕೆ ಕಾಲೇಜು ಪ್ರಾಂಶುಪಾಲರು ಹಾಗೂ ಪ್ರೌಢಶಾಲಾ ಮುಖ್ಯ ಮಂತ್ರಿ ಸುಜನ್.ಕೆ ಇವರಿಗೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಮಂತ್ರಿ ಮಂಡಲದ ಉಭಯ ಸದಸ್ಯರುಗಳಿಗೆ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಚುನಾವಣೆ ಅಧಿಕಾರಿಗಳು ಪ್ರಮಾಣವಚನ ಬೋಧಿಸಿದರು.
ಪ್ರಾಂಶುಪಾಲರಾದ ಚೆನ್ನಮ್ಮ.ಪಿ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ.ಎಂ, ಕಾಲೇಜು ವಿಭಾಗದ ಚುನಾವಣಾ ಅಧಿಕಾರಿ ರಂಜಿತ್ ಅಂಬೆಕಲ್ಲು, ಪ್ರೌಢಶಾಲಾ ವಿಭಾಗದ ಚುನಾವಣಾ ಅಧಿಕಾರಿ ಸುನಿಲ್ ಉಪಸ್ಥಿತರಿದ್ದರು. ಉಪನ್ಯಾಸಕಿ ದೀಪ್ತಿ.ಐ.ಪಿ ಸ್ವಾಗತಿಸಿದರು, ಉಪನ್ಯಾಸಕಿ ದೀಕ್ಷಾ.ಎಂ.ಬಿ ಅತಿಥಿಗಳ ಪರಿಚಯ ಸಭೆಗೆ ತಿಳಿಸಿದರು ಉಪನ್ಯಾಸಕಿ ಪ್ರೀತಿ.ಪಿ. ರೈ ವಂದಿಸಿ, ಉಪನ್ಯಾಸಕಿ ದಿವ್ಯ.ಕೆ ಕಾರ್ಯಕ್ರಮ ನಿರೂಪಿಸಿದರು.










