ಪೈಚಾರ್ ನ ಯುವಕರು ಸಮಾಜ ಸೇವೆಯೊಂದಿಗೆ ಪರಿಸರ ಸಂರಕ್ಷಣೆಯಲ್ಲಿ ಮಾದರಿ:ವೆಂಕಟೇಶ್
ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ವತಿಯಿಂದ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ವನಮಹೋತ್ಸ ಕಾರ್ಯಕ್ರಮ ಜು.6 ರಂದು ಅಲ್ ಅಮೀನ್ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪೈಚಾರ್ ಜುಮ್ಮಾ ಮಸೀದಿ ಖತೀಬರಾದ ಶಮೀರ್ ನಹೀಮಿ ದುವಾಶಿರ್ವಚನ ಮೂಲಕ ಉದ್ಘಾಟನೆಯನ್ನು ಮಾಡಿದರು.
ಸುಳ್ಯ ವಲಯ ಅರಣ್ಯಾಧಿಕಾರಿ ವೆಂಕಟೇಶ್ ಸಸಿ ವಿತರಣೆ ಅಲ್ ಅಮೀನ್ ಯೂತ್ ಸೆಂಟರ್ ಇದು ಒಂದು ಮಾದರಿ ಸಂಸ್ಥೆ ಪರಿಸರ ಸಂರಕ್ಷಣೆ ಜೋತೆ ಸಮಾಜಮುಖಿ ಕೆಲಸವನ್ನು ಮಾಡುತ್ತ ಬಂದಿದ್ದಾರೆ ಇವರ ಸೇವೆ ಸಮಾಜಕ್ಕೆ ಮಾದರಿ ಎಂದವರು ಹೇಳಿದರು.















ಯೂತ್ ಸೆಂಟರ್ ಉಪಾಧ್ಯಕ್ಷ ಹನೀಫ್ ಅಲ್ಪಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಆರ್ ಬಿ ಬಶೀರ್ , ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್,ಪೈಚಾರ್ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಪಿ,ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಶುಭಹಾರೈಸಿದರು.
ಅಲ್ ಅಮೀನ್ ಕಛೇರಿ ಮುಂಭಾಗದಲ್ಲಿ ಸಸಿ ನೆಟ್ಟು ಸಸಿ ವಿತರಣೆ ಕಾರ್ಯಕ್ರಮ ಚಾಲನೆ ನೀಡಿದರು.
ಅಲ್ ಅಮೀನ್ ಯೂತ್ ಸೆಂಟರ್ ಸದಸ್ಯರು ಹಾಗೂ ಸಾರ್ವಜನಿಕರು ಮನೆ ಮನೆಗಳಿಗೆ ಗಿಡಗಳನ್ನು ಕೊಂಡೊಯ್ದುರು.
ಕಾರ್ಯದರ್ಶಿ ಶಾಲಿ ಪಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕೋಶಾಧಿಕಾರಿ ಸಲಾಂ ಪಿ ಎಸ್ ಧನ್ಯವಾದ ಸಮರ್ಪಣೆ ಮಾಡಿದರು.










