ಅಜ್ಜಾವರ ಇರುವಂಬಳ್ಳ ಜುಮ್ಮಾ ಮಸೀದಿ ಹಾಗೂ ಮಾಪಳಡ್ಕ ದರ್ಗಾ ಸಮಿತಿಯ ಮಹಾಸಭೆ

0

ಅಧ್ಯಕ್ಷರಾಗಿ ಎ ಬಿ ಅಶ್ರಫ್ ಸಹದಿ ಪುನರಾಯ್ಕೆ

ಅಜ್ಜಾವರ ಇರುವಂಬಳ್ಳ ಜುಮ್ಮಾ ಮಸೀದಿ ವಾರ್ಷಿಕ ಮಹಾಸಭೆ ಇತ್ತೀಚೆಗೆ ಇರುವಂಬಳ್ಳ ಜುಮ್ಮಾ ಮಸೀದಿ ಸಭಾಂಗಣದಲ್ಲಿ ಜಮಾಯತ್ ಕಮಿಟಿ ಅಧ್ಯಕ್ಷರಾದ ಎಬಿ ಅಶ್ರಫ್ ಸಹದಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಾಸಭೆಯ ವೀಕ್ಷಕರಾಗಿ ವಕ್ಪ್ ಅಧಿಕಾರಿ ಅಬೂಭಕ್ಕರ್ ಅಗಮಿಸಿ ಮಹಾಸಭೆ ನಡೆಸಿಕೊಟ್ಟರು.

ಜಮಾಯತ್ ಖತೀಬರಾದ ಅಶ್ರಫ್ ನಹಿಮಿ ಯವರನ್ನು ದುವಾಶಿರ್ವಚನ ಮೂಲಕ ಸಭೆಯನ್ನು ಆರಂಭಿಸಿದರು.

ಮಹಮ್ಮದ್ ಮದನಿ ಸ್ವಾಗತಿಸಿ, ಸಮಿತಿ ಕಾರ್ಯದರ್ಶಿಗಳು ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.
ಸಭೆಯ ನಂತರ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಎಬಿ ಅಶ್ರಫ್ ಸಹದಿ ಪುನರಾಯ್ಕೆ ಯಾದರು.

ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಮೈತ್ತಡ್ಕ,ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಕುಂಞಿ ತುಪ್ಪಕ್ಕಲ್,ಕೋಶಾಧಿಕಾರಿ ಯಾಗಿ ಹಸೈನಾರ್ ಧರ್ಮತ್ತನ್ನಿ,ಕಾರ್ಯದರ್ಶಿ ಗಳಾಗಿ ಅಬೂಭಕ್ಕರ್ ಟಿ ಹೆಚ್,ಸಿದ್ದೀಕ್ ಬೊವಿಕ್ಕಾನ,ಸದಸ್ಯರುಗಳಾಗಿ ಸಿ ಕೆ ಮಹಮ್ಮದ್ ಕುಂಞಿ ಹಾಜಿ,ಅಂದುಙಿ ಗೋರಡ್ಕ,ಸಿ ಹೆಚ್ ಮಹಮ್ಮದ್ ಕುಂಞಿ ಹಾಜಿ,ಕಯಾಬು ಕೆನಾಜೆ,ಶಾಫಿ ಪುಳಿಯಡಿ ಯವರನ್ನು ಆಯ್ಕೆಮಾಡಲಾಯಿತು.