ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರೌಢಶಾಲೆ ಆರ್ ಎಂ ಎಸ್ ಎ ಸಂಪಾಜೆ ಇವರ ನೇತೃತ್ವದಲ್ಲಿ 2024 -25ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ಕೊಂಡ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಜಯಶ್ರೀ ಎನ್ ಕೆ. ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮವನ್ನು ಮಾಜಿ ಗ್ರಾಮ್ ಪಂಚಾಯತ್ ಅಧ್ಯಕ್ಷರು ಹಾಗೂ ಹಾಲಿ ವಾರ್ಡ್ ಸದಸ್ಯರಾಗಿರುವ ಹಮೀದ್ ಜಿ ಕೆ ಇವರು ಉದ್ಘಾಟಿಸಿ ಶಾಲೆಯ ಬೆಳವಣಿಗೆಯ ಬಗ್ಗೆ ಶ್ಲಾಘಿಸುತ್ತಾ, ಶಾಲೆಗೆ ಗ್ರಾಮ ಪಂಚಾಯಿತಿನ ಸಹಕಾರದ ಬಗ್ಗೆ ಭರವಸೆಯ ಮಾತನಾಡಿದರು.

ಸಾಧಕ ವಿದ್ಯಾರ್ಥಿಗಳ ಬಗ್ಗೆ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀಮತಿ ನಯನಕುಮಾರಿ ಇವರು ಮಾತನಾಡಿದರು. ಅತಿ ಹೆಚ್ಚು ಅಂಕವನ್ನು ಪಡೆದುಕೊಂಡಂತಹ ವಿದ್ಯಾರ್ಥಿಗಳನ್ನು ಊರಿನ ಹಿರಿಯರಾದ ಹಾಗೂ ಶಾಲೆಯ ಹಿತೈಷಿ,ದಾನಿಗಳು ಆದಂತಹ ಕೊಂದಲ ಕಾಡು ನಾರಾಯಣ ಭಟ್ ಇವರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದಂತಹ ಶ್ರೀಮತಿ ಸುಮತಿ ಶಕ್ತಿ ವೇಲು ಇವರು ಶಾಲುಹೊದಿಸಿ ಸನ್ಮಾನಿಸಿ ಪ್ರೋತ್ಸಾಹಿಸಿದರು.
ತಿರುಮಲೇಶ್ವರ ಭಟ್ ಮತ್ತು ಹೊನ್ನಪ್ಪ ಕೆಕೆ ಎಸ್ ಎಸ್ ಎಲ್ ಸಿ ಯ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಇರಿಸಿದ ದತ್ತಿನಿಧಿಯ ಅರ್ಧಾಂಶವನ್ನು ಅರ್ಹ ವಿದ್ಯಾರ್ಥಿಗಳಿಗೆ ನೀಡಿ ಪ್ರೋತ್ಸಾಹಿಸಲಾಯಿತು. ಶ್ರೀಯುತ ಕೊಂದಲ ಕಾಡು ನಾರಾಯಣ ಭಟ್ ಮತ್ತು ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಂತಹ ಶ್ರೀಮತಿ ಚಂದ್ರಾವತಿಯವರು ಮೂವರು ವಿದ್ಯಾರ್ಥಿಗಳನ್ನು ಗೌರವ ಧನ ನೀಡುವುದರೊಂದಿಗೆ ಪ್ರೋತ್ಸಾಹಿಸಿದರು. ಎಲ್ಲ ಶಿಕ್ಷಕರು ತಮ್ಮ ತಮ್ಮ ವಿಷಯಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದುಕೊಂಡಂತಹ ವಿದ್ಯಾರ್ಥಿಗಳನ್ನು ಗೌರವ ಧನ ನೀಡುವುದರೊಂದಿಗೆ ಪ್ರೋತ್ಸಾಹಿಸಿದರು.















ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀಮತಿ ಚಂದ್ರಾವತಿ ಡಿ ಇವರು ಶಾಲೆಯ ಸಂಘಗಳನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಶಾಲೆಯಲ್ಲಿ ಸಕ್ರಿಯರಾಗಿರಿ ಪೋಷಕರು ವಿದ್ಯಾರ್ಥಿಗಳನ್ನು ಧನಾತ್ಮಕವಾಗಿ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಪ್ರಾಥಮಿಕ ಎಸ್ ಡಿ ಎಂ ಸಿ ಯಾ ಅಧ್ಯಕ್ಷರಾದ ಮಹಮ್ಮದ್ ಹನೀಫ್ ರವರು ಮಾತನಾಡುತ್ತಾ ಪೋಷಕರು ಶಾಲೆಯ ಅಭ್ಯುದಯಕ್ಕಾಗಿ ಸದಾ ಸಹಕರಿಸಬೇಕೆನ್ನುವ ಕರೆ ನೀಡಿದರು.
ಕೇಶವ ಕನ್ನಡ ಅಧ್ಯಾಪಕರು ವಂದಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು, ಉಪಾಧ್ಯಕ್ಷರಾದ ಹಮೀದ್ ಎಸ್ ಕೆ ವಾರ್ಡ್ ಸದಸ್ಯರುಗಳಾದ ಶ್ರೀಮತಿ ಸುಂದರಿ ಮುಂಡಡ್ಕ, ಹಮೀದ್ ಜಿ ಕೆ
ಹಿರಿಯರಾದ ನಾರಾಯಣ ಭಟ್ ಕೊಂದಲ ಕಾಡು, ನಿವೃತ್ತ ಮುಖ್ಯ ಗುರು ಶ್ರೀಮತಿ ಚಂದ್ರಾವತಿ, ದತ್ತಿನಿಧಿ ದಾನಿಗಳಾದ ಹೊನ್ನಪ್ಪ ಕೆ ಕೆ , SDMC ಅಧ್ಯಕ್ಷರಾದ ಮಹಮ್ಮದ್ ಹನೀಫ್, ಪ್ರೌಢಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀಮತಿ ಜಯಶ್ರೀ ಎನ್ ಕೆ, ಪ್ರಾಥಮಿಕ ಶಾಲಾ ವಿಭಾಗದ ಹಿರಿಯ ಶಿಕ್ಷಕಿಯಾದ ಶ್ರೀಮತಿ ರೋಹಿಣಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು, ಶಾಲಾ ಮುಖ್ಯಮಂತ್ರಿ ಯಶಸ್ ಡಿ ಬಿ ಇವರು ವೇದಿಕೆಯಲ್ಲಿದ್ದರು.
ಶಾಲೆಯ ಪೋಷಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರದಲ್ಲಿ ಪೋಷಕರ ಸಭೆ ಮತ್ತು SDMC ಪುನರ್ ರಚನೆ ಕಾರ್ಯಕ್ರಮವು ನಡೆಯಿತು. ಪ್ರಾಥಮಿಕ ವಿಭಾಗದ ಹಿರಿಯ ಶಿಕ್ಷಕರಾದ ಶ್ರೀಮತಿ ರೋಹಿಣಿ ಸ್ವಾಗತಿಸಿ, ಒಂದನೇ ತರಗತಿಗೆ ಆಂಗ್ಲ ಮಾಧ್ಯಮದ ಅನುಮೋದನೆಯ ಬಗ್ಗೆ ಮಾಹಿತಿ ನೀಡಿದರು.ಮುಖ್ಯ ಗುರುಗಳಾದ ಶ್ರೀಮತಿ ಜಯಶ್ರೀ ಏನ್ ಕೆ ಇವರು ಸರಕಾರದ ಸವಲತ್ತುಗಳು ಹಾಗೂ ಶಾಲೆಯೊಂದಿಗೆ ಸಮುದಾಯದ ಸಹಕಾರದ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಶಿಸ್ತು, ಸಮಯ ಪಾಲನೆ, FLN ಮುಂತಾದ ವಿಷಯಗಳ ಬಗ್ಗೆ ಶಾಲೆಯ ಹಿಂದಿ ಶಿಕ್ಷಕಿಯಾದ ಶ್ರೀಮತಿ ಇಂದಿರಾವತಿ, ತಂಬಾಕು ಸೇವನೆಯ ಪರಿಣಾಮ ಮತ್ತು ಜಾಗೃತಿ ವಿಷಯದಲ್ಲಿ ಸಮಾಜ ವಿಜ್ಞಾನ ಶಿಕ್ಷಕಿ ಕುಮಾರಿ ನಿಶ್ಮಿತಾ ಮಾತನಾಡಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಎಸ್ ಡಿ ಎಂ ಸಿ ಯ ಪುನರ್ ರಚನೆಯ ನಂತರ ಪ್ರಾಥಮಿಕ ಶಾಲಾ ವಿಭಾಗದ ವಿಜ್ಞಾನ ಶಿಕ್ಷಕಿಯಾಗಿರುವ ಶ್ರೀಮತಿ ಪವಿತ್ರ ಇವರು ಸರ್ವರನ್ನು ವಂದಿಸಿದರು.ದೈಹಿಕ ಶಿಕ್ಷಣ ಶಿಕ್ಷಕಿ ಸುಜಯಕುಮಾರಿ ಬಿ ಡಿ ಕಾರ್ಯಕ್ರಮ ನಿರೂಪಿಸಿದರು.










