ಬೆಳ್ಳಾರೆಯಲ್ಲಿ ಧರ್ಮಶ್ರೀ ಡಿಜಿಟಲ್ ಸೇವಾ ಕೇಂದ್ರ ಮತ್ತು ಧರ್ಮಶ್ರೀ ರೆಪ್ರಿಜರೇಷನ್ ಏರ್ ಕಂಡಿಷನಿಂಗ್ ಸರ್ವಿಸ್ ಸೆಂಟರ್ ಶುಭಾರಂಭ

0

ಬೆಳ್ಳಾರೆಯ ಕೆಳಗಿನ ಪೇಟೆಯ ಆಳ್ವ ಕ್ಲೋತ್ ಸೆಂಟರ್ ಬಳಿ ಶ್ರೀ ಧರ್ಮಶ್ರೀ ಡಿಜಿಟಲ್ ಸೇವಾ ಕೇಂದ್ರ ಸಿ.ಎಸ್.ಸಿ ಸೇವಾ ಸಿಂಧು ಮತ್ತು ಶ್ರೀ ಧರ್ಮಶ್ರೀ ರೆಪ್ರಿಜರೇಷನ್ ಮತ್ತು ಏರ್ ಕಂಡಿಷನಿಂಗ್ ಸರ್ವಿಸ್ ಸೆಂಟರ್ ಜು.12 ರಂದು ಶುಭಾರಂಭಗೊಂಡಿತು.

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಗಣಹೋಮ ನೆರವೇರಿಸಿ ದೀಪ ಬೆಳಗಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಕಿರಣ್ ಮತ್ತು ಶ್ರೀಮತಿ ಪ್ರೀತಿಕಿರಣ್ ಮತ್ತು ತಿಮ್ಮಪ್ಪ ಗೌಡ ಕೊಂಡೆಬಾಯಿ ಸರ್ವರನ್ನೂ ಸ್ವಾಗತಿಸಿದರು. ಸ್ಥಳೀಯ ಅಂಗಡಿ ಮಾಲಕರು, ಬಂಧು ಮಿತ್ರರು ಆಗಮಿಸಿ ಶುಭ ಹಾರೈಸಿದರು. ಡಿಜಿಟಲ್ ಸೇವಾ ಕೇಂದ್ರದಲ್ಲಿ ಆನ್ ಲೈನ್ ಸೇವೆಗಳು ಹಾಗೂ ಎಲ್ಲಾ ಕಂಪನಿಯ ಎ.ಸಿ,ಫ್ರಿಡ್ಜ್, ವಾಷಿಂಗ್ ಮೆಷಿನ್,ಗೀಸರ್,ಒವೆನ್ ಇನ್ನಿತರ ಇಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಕ್ಲಪ್ತ ಸಮಯದಲ್ಲಿ ದುರಸ್ತಿ ಪಡಿಸಿಕೊಡಲಾಗುವುದು ಎಂದು ಮಾಲಕರು ತಿಳಿಸಿದರು.