ಸುಳ್ಯದ ಸ್ನೇಹ ಶಾಲೆಗೆ ಪಟ್ಟೆ ಅನುದಾನಿತ ಶಾಲಾ ಶಿಕ್ಷಕರ ಭೇಟಿ

0

ಪುತ್ತೂರು ತಾಲೂಕಿನ ಕೌಡಿಚ್ಚಾರ್ ಬಳಿಯ ಶ್ರೀಕೃಷ್ಣ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 21 ಶಿಕ್ಷಕಿ ಶಿಕ್ಷಕರು 12-6-2025 ರಂದು ಸುಳ್ಯದ ಸ್ನೇಹ ಶಾಲೆಗೆ ಭೇಟಿ ನೀಡಿದರು. ಶೈಕ್ಷಣಿಕ ಸೌಲಭ್ಯಗಳ ವೀಕ್ಷಣೆ ಮತ್ತು ಕಲಿಕಾ ಪ್ರಕ್ರಿಯೆಗಳ ಬಗ್ಗೆ ವಿನಿಮಯ ದೃಷ್ಟಿಯಿಂದ ಏರ್ಪಡಿಸಿದ ಈ ಭೇಟಿಯಲ್ಲಿ ಪ್ರಸ್ತುತ
ಈ ಶಾಲೆಗಳನ್ನು ದತ್ತು ಪಡೆದು ನಡೆಸುತ್ತಿರುವ ಪುತ್ತೂರಿನ ದ್ವಾರಕಾ ಉದ್ಯಮದ ಅಧ್ಯಕ್ಷ. ಗೋಪಾಲಕೃಷ್ಣ ಭಟ್ಟರು ಮತ್ತು ಕರೆಸ್ಪಾಂಡೆಂಟ್ ವಿಘ್ನೇಶ್ ಹಿರಣ್ಯ ಕೂಡಾ ಇದ್ದರು.


ಪಟ್ಟೆ ಶಾಲಾ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡ ಸ್ನೇಹ ಶಾಲಾ ಅಧ್ಯಕ್ಷರು ಮತ್ತು ಶಿಕ್ಷಕರು ಸ್ನೇಹ ಶಾಲೆಯ ಸೂರ್ಯಾಲಯದಿಂದ ತೊಡಗಿ ಕಲಾಶಾಲೆ, ಬರಹದ ಮನೆ, ವೃತ್ತಾಕಾರದ ಕೊಠಡಿಗಳು, ಭಾರತ ಮಾತೆ, ಗುರುಕುಲ, ಭತ್ತದ ಗದ್ದೆ, ಬಯಲುರಂಗಮಂದಿರ, ವಿಜ್ಞಾನ ಉದ್ಯಾನ ಇತ್ಯಾದಿ ವಿವಿಧ ಸೌಲಭ್ಯಗಳ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ರಾಮಕುಂಜದ ಪ್ರಾಂಶುಪಾಲ ಪ್ರೊ. ಗಣರಾಜ ಕುಂಬಳೆಯವರೂ ಉಪಸ್ಥಿತರಿದ್ದು ದಾಮ್ಲೆ ದಂಪತಿಗಳನ್ನು ಸನ್ಮಾನಿಸಿದರು. ಮುಂದಿನ ದಿನಗಳಲ್ಲಿ ಶಿಕ್ಷಣದ ಅಭಿವೃದ್ಧಿಗಾಗಿ ಹೆಚ್ಚಿನ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳನ್ನು ನಡೆಸುವುದಾಗಿ ಎರಡೂ ಸಂಸ್ಥೆಗಳ ಮಧ್ಯೆ ಒಪ್ಪಂದ ನಡೆಯಿತು.