ವಿದ್ಯುತ್ , ಆನೆ ಹಾವಳಿ, ಸೋಲಾರ್ ಅಳವಡಿಕೆ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ
ಸಭೆಗೆ ಇಲಾಖಾಧಿಕಾರಿಗಳ ಗೈರು : ಕ್ರಮ ಕೈಗೊಳ್ಳಲು ನಿರ್ಣಯ

ಅರಂತೋಡು ಗ್ರಾಮ ಪಂಚಾಯತ್ 2025 -26 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಅಮೃತ ಸಭಾಂಗಣದಲ್ಲಿ ಜು 14 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಉಪಸ್ಥಿತಿಯಲ್ಲಿ ನಡೆಯಿತು. ನೋಡೆಲ್ ಅಧಿಕಾರಿಯಾಗಿ ಸುಳ್ಯ ಸಾಮಾಜಿಕ ವಲಯ ಅರಣ್ಯಾಧಿಕಾರಿ ಸಂಜು ಡಿ ಲಮಾಣಿ ಅವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್ ಸ್ವಾಗತಿಸಿ , ಪಂಚಾಯತ್ ಸಿಬ್ಬಂದಿ ಈಶ್ವರ್ ಅವರು ಜಮಾ ಖರ್ಚಿನ ವರದಿ ಮಂಡಿಸಿದರು.
ಬಳಿಕ ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಆನೆ ಹಾವಳಿ, ಸೋಲಾರ್ ಅಳವಡಿಕೆ, ವಿದ್ಯುತ್ ಸಮಸ್ಯೆ, ಚರಂಡಿ ವ್ಯವಸ್ಥೆ , ಆರೋಗ್ಯ , ರಸ್ತೆ ,
ಫಲಾನುಭವಿಗಳಿಗೆ ಪರಿಹಾರ , ಬೀದಿನಾಯಿಗಳ ಹಾವಳಿ, ಸ್ವಚ್ಛತಾ ಘಟಕ, ಮೊದಲಾದ ಮೂಲ ಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲಾಯಿತು.








ಮಾಹಿತಿ ನೀಡಲು ಶಿಕ್ಷಣ ಇಲಾಖಾಧಿಕಾರಿಗಳ ಗೈರು ಹಾಜರಾಗಿದ್ದು
ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು. ಸಭೆಯಲ್ಲಿ ಅಧ್ಯಕ್ಷರ ಮುಖಾಂತರ ಜಿಲ್ಲೆಯ ಅಧಿಕಾರಿಗಳಿಗೆ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಮರಳು ನೀತಿಯ ಬಗ್ಗೆ ಪಂಚಾಯತ್ ಆಡಳಿತಕ್ಕೆ ಮುತುವರ್ಜಿಗೆ ಕೊಡುವ ಬಗ್ಗೆ ,ಸರಕಾರದಿಂದ ಫಲಾನುಭವಿಗಳಿಗೆ ಸಿಗುವ ಸಬ್ಸಿಡಿ ಗಳ ಕುರಿತು ಸಭೆಯಲ್ಲಿ
ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಭವಾನಿ ಸಿ. ಎ, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಸಂತೋಷ್ ಕುತ್ತ ಮೊಟ್ಟೆ, ಗ್ರಾಮ.ಪಂ ಸದಸ್ಯರಾದ ಸದಸ್ಯರಾದ ಶಿವಾನಂದ ಕುಕ್ಕಂಬಳ, ಗಂಗಾಧರ ಬನ, ರವೀಂದ್ರ ಪೂಜಾರಿ, ವೇಣುಗೋಪಾಲ ಪೆತ್ತಾಜೆ, ಮಾಲಿನಿ ಉಳುವಾರು ಶಶಿಧರ ತೊಡಿಕಾನ, ಹರಿಣಿ ದೇರಾಜೆ, ಸರಸ್ವತಿ ಬಿಳಿಯಾರು, ಭವಾನಿ ಅಡ್ಯಡ್ಕ, ಪುಷ್ಪಾದರ
ನಿವೃತ್ತ ವಿಶ್ರಾಂತ ಪ್ರಾಂಶುಪಾಲರು ಕೆ. ಆರ್ ಗಂಗಾಧರ , ಹೊನ್ನಪ್ಪ ಮಾಸ್ತರ್, ಕಿಶೋರ್ ಕುಮಾರ್ ಉಳುವಾರು, ಭಾರತಿ ಪುರುಷೋತ್ತಮ , ಅರಣ್ಯ ಇಲಾಖೆ , ಆರೋಗ್ಯ, ಪಶುವೈದ್ಯ ಇಲಾಖೆ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ , ಬ್ಯಾಂಕ್ , ಮೆಸ್ಕಾಂ ಇಲಾಖೆ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ , ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಭವಾನಿ ಸಿ. ಎ ಧನ್ಯವಾದಿಸಿದರು.
ಕೊನೆಗೆ ರಾಷ್ಟ್ರ ಗೀತೆ ಹಾಡುವುದರ ಮೂಲಕ ಸಭೆಯು ಮುಕ್ತಾಯ ಗೊಂಡಿತು.
ಬಳಿಕ ಗ್ರಾಮ ಪಂಚಾಯತ್ ವತಿಯಿಂದ ಉಚಿತ ಹೂವಿನ ಗಿಡಗಳಗನ್ನು ವಿತರಿಸಲಾಯಿತು.










