ಎಂ.ಬಿ.ಯವರ ಸಾಂದೀಪ್ ವಿಶೇಷ ಶಾಲೆಯಲ್ಲಿ ಮಾ. ಅದ್ವಿಕ್ ನ ಹುಟ್ಟು ಹಬ್ಬ ಆಚರಣೆ

0

ಸುಳ್ಯದಎಂ.ಬಿ.ಪೌಂಡೇಷನ್ ರವರ ಸಾಂದೀಪ್ ವಿಶೇಷ ಶಾಲೆಯಲ್ಲಿ ಮಾ. ಅದ್ವಿಕ್ ನ 2 ನೇ ವರ್ಷದ ಹುಟ್ಟು ಹಬ್ಬವನ್ನು ಜು.14 ರಂದು ಆಚರಿಸಲಾಯಿತು.

ಶಾಲೆಯಲ್ಲಿ ಮಕ್ಕಳೊಂದಿಗೆ ಸೇರಿದೀಪ ಬೆಳಗಿಸಿ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಶಾಲೆಯ ಸಂಚಾಲಕ ಲಯನ್ಎಂ.ಬಿ.ಸದಾಶಿವ ರವರು ವಿಜಯ್ ಟ್ರೇಡರ್ಸ್ ಮಾಲಕ ವಿಜಯ್ ಎಂ. ಮತ್ತು ಶ್ರೀಮತಿ ಅಂಜಲಿ ದಂಪತಿಯ ಪುತ್ರ ಮಾ. ಅದ್ವಿಕ್ ಗೆ ಶುಭಾಶೀರ್ವದಿಸಿದರು. ಈ ಸಂದರ್ಭದಲ್ಲಿ ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ,ಸಹೋದರ ಕೇಶವ ಮೊರಂಗಲ್ಲು ಹಾಗೂ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಅದ್ವಿಕ್ ಗೆ ಶುಭ ಹಾರೈಸಿದರು.

ಮಧ್ಯಾಹ್ನ ಎಲ್ಲಾ ಮಕ್ಕಳಿಗೆ ಹುಟ್ಟು ಹಬ್ಬದ ಸಲುವಾಗಿ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.