ಪೆರುವಾಜೆ ಗ್ರಾಮ ಪಂಚಾಯತ್ ಗ್ರಾಮ ಸಭೆ

0

ಆಧಾರ್ ಕೇಂದ್ರ, ಪರ್ಮನೆಂಟ್ ಗ್ರಾಮಲೆಕ್ಕಾಧಿಕಾರಿ ನೇಮಕ,ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ

ಪೆರುವಾಜೆ ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜು.15 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಾ ರವರು ನೋಡೆಲ್ ಅಧಿಕಾರಿಯಾಗಿದ್ದರು. ಪಿಡಿಒ ತಿರುಮಲೇಶ್ವರ್ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಜಯಲಕ್ಷ್ಮೀಯವರು ವರದಿ ಮಂಡಿಸಿದರು.


ಆಧಾರ್ ತಿದ್ದುಪಡಿ ಕೇಂದ್ರ,ರಸ್ತೆ ಸಮಸ್ಯೆ,ಪರ್ಮನೆಂಟ್ ಗ್ರಾಮ ಲೆಕ್ಜಾಧಿಕಾರಿ ನೇಮಕ, ಸಭೆಗೆ ಗೈರಾದ ಇಲಾಖಾದಿಗಳ ಬಗ್ಗೆ,ಕೆಂಪುಕಲ್ಲು,ಮರಳು ಸಮಸ್ಯೆ,ಬೀದಿನಾಯಿಗಳ ಕಾಟ,ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಹಿನಾಜ್ ,ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.
ಸಿಬ್ಬಂದಿ ಅಕ್ಷತಾ ವಂದಿಸಿದರು.