ಐವರ್ನಾಡು ಬಿ. ಜೆ. ಪಿ. ಶಕ್ತಿ ಕೇಂದ್ರದ ವತಿಯಿಂದ ರಸ್ತೆಗಳ ಅನುದಾನಕ್ಕಾಗಿ ಸಂಸದ ಕ್ಯಾ.ಚೌಟರಿಗೆ ಮನವಿ

0

ಐವರ್ನಾಡು ಗ್ರಾಮದ ಮೂರು ರಸ್ತೆಗಳನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅನುದಾನ ಬಿಡುಗಡೆಗೊಳಿಸುವಂತೆ ಕ್ಯಾ.ಬ್ರಿಜೇಶ್ ಚೌಟರವರಿಗೆ ಜು.15 ರಂದು ಮನವಿ ನೀಡಲಾಯಿತು.


ಐವರ್ನಾಡು ಗ್ರಾಮದ ಐವರ್ನಾಡು ಪಂಚಾಯತಿ ಬಳಿಯಿಂದ ದೇರಾಜೆ – ಕೋಡ್ತಿಲು-ಶೇಣಿಯ ಅಮರ ಪಡ್ನೂರು ಗ್ರಾಮವನ್ನು ಸಂಪರ್ಕಿಸುವ ರಸ್ತೆ ( 5 ಕಿ.ಮೀ)(ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಸ್ತೆ), ಪಾಲೆಪ್ಪಾಡಿ- ಸಿ ಕೂಪ್-ದೇವರಕಾನ -ಮೊಗಪ್ಪೆ ರಸ್ತೆ ಬೆಳ್ಳಾರೆ ಗ್ರಾಮವನ್ನು ಸಂಪರ್ಕಿಸುವ ರಸ್ತೆ, ಪರ್ಲಿಕಜೆ- ನಿಡುಬೆ-ಜಬಳೆ ಕೊಚ್ಚಿ – ಮಾವಿನಕಟ್ಟೆ ಕೊಳ್ತಿಗೆ ಗ್ರಾಮವನ್ನು ಸಂಪರ್ಕಿಸುವ ರಸ್ತೆ. ಈ ಮೇಲ್ಕಂಡ ಮೂರು ರಸ್ತೆಯನ್ನು ಈ ಹಿಂದೆಯೆ ಪ್ರಧಾನಮಂತ್ರಿ ಗ್ರಾಮ ಸಡಕ್ ಇಂಜಿನಿಯರ್ ಗಳು ಬಂದು ರಸ್ತೆಯ ಸರ್ವೆಯನ್ನು ಮಾಡಿದ್ದು ಅವುಗಳಿಗೆ ಆದಷ್ಟು ಬೇಗ ಅನುದಾನವನ್ನು ಬಿಡುಗಡೆ ಮಾಡಿ ಕಾಮಗಾರಿಯನ್ನು ಮಾಡಿಸುವಂತೆ ವಿನಂತಿಸಿದ್ದಾರೆ.


ಹಾಗೂ ಬಾಂಜಿಕೋಡಿ-ಚೆಮ್ನೂರು- ಕಣಿಪ್ಪಿಲ ರಸ್ತೆ, ಸುಮಾರು 2 ಕಿ.ಮೀ ರಸ್ತೆಗೆ ಡಾಂಬರೀಕರಣಕ್ಕೆ ಅನುದಾನವನ್ನು ಒದಗಿಸಿ ಅಭಿವೃದ್ಧಿಪಡಿಸಬೇಕಾಗಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಐವರ್ನಾಡು ಶಕ್ತಿ ಕೇಂದ್ರದ ಅಧ್ಯಕ್ಷ ನಂದಕುಮಾರ್ ಬಾರೆತ್ತಡ್ಕ, ಕಿಶನ್ ಜಬಳೆ ,ನವೀನ್ ಸಾರಕೆರೆ,,ರಕ್ಷಿತ್ ಸಾರಕೂಟೇಲು, ನಿಖಿಲ್ ಮಡ್ತಿಲ,ಅನಿಲ್ ದೇರಾಜೆ,ಭಾಸ್ಕರ ಕೀಲಾಡಿ, ಗಣೇಶ್ ಕೊಚ್ಚಿ, ಧೀರಾಜ್ ಚೆಮ್ನೂರು,ರಂಜಿತ್ ಮೂಲೆ ತೋಟ, ಪ್ರೇಮಾನಂದ ಪಾರ್ಚೋಡು,ದೀಕ್ಷಿತ್ ಚೆಮ್ನೂರು, ಪ್ರವೀಣ್ ಚೆಮ್ನೂರು, ಗಣೇಶ ಬದಂತಡ್ಕ,ಚಂದ್ರ ಕೋಲ್ಚಾರ್ ಮೊದಲಾದವರು ಉಪಸ್ಥಿತರಿದ್ದರು.