ದಿ.ವಿಶ್ವನಾಥ ಗೌಡ ನೀರ್ಪಾಡಿಯವರ ವೈಕುಂಠ ಸಮಾರಾಧನೆ ಮತ್ತು ನುಡಿನಮನ ಕಾರ್ಯಕ್ರಮ

0

ಇತ್ತೀಚಿಗೆ ನಿಧನರಾದ ದಿ.ವಿಶ್ವನಾಥ ಗೌಡ ನೀರ್ಪಾಡಿಯವರ ವೈಕುಂಠ ಸಮಾರಾಧನೆ ಮತ್ತು ನುಡಿನಮನ ಕಾರ್ಯಕ್ರಮ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜು. 14 ನಡೆಯಿತು.

ಸಂಕಪ್ಪ ಗೌಡ ನೀರ್ಪಾಡಿ ದೀಪ ಬೆಳಗಿಸಿದರು. ದಿ.ವಿಶ್ವನಾಥ್ ರವರ ಬಂಧು, ವಿಶ್ರಾಂತ ಪ್ರಾಂಶುಪಾಲ ಬಾಲಚಂದ್ರ ಗೌಡ ಮತ್ತು ದಿ. ವಿಶ್ವನಾಥ ಗೌಡರ ಸಹಪಾಠಿ ಜಯಪ್ರಕಾಶ್ ರೈ ಅವರು ಮೃತರ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಿ. ವಿಶ್ವನಾಥ್ ರವರ ಪತ್ನಿ ಶ್ರೀಮತಿ ಪುಷ್ಪಾವತಿ ನೀರ್ಪಾಡಿ, ಪುತ್ರರಾದ ವಿಪಿನ್ ನೀರ್ಪಾಡಿ, ವಿಪುಲ್ ನೀರ್ಪಾಡಿ, ಸೊಸೆಯಂದಿರು, ಮೊಮ್ಮಕ್ಕಳು ಕುಟುಂಬಸ್ಥರು, ಬಂಧು ಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು ಶ್ರೀಮತಿ ತೇಜಸ್ವಿನಿ ಕಿರಣ್ ನೀರ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.