ಹರಿಹರ ಪಲ್ಲತಡ್ಕ: ನದಿ ಈಜಿ ವಿದ್ಯುತ್ ಸಂಪರ್ಕ ಕೊಟ್ಟ ಮೆಸ್ಕಾಂ

0

ನದಿ ಈಜಿದ ಸೊಸೈಟಿ ನಿರ್ದೇಶಕ

ಹರಿಹರ ಪಲ್ಲತಡ್ಕದ ಗುಂಡಡ್ಕ ಎಂಬಲ್ಲಿ ವಿದ್ಯುತ್ ಲೈನ್ ತುಂಡಾಗಿ ನದಿಗೆ ಬಿದ್ದಿರುವುದನ್ನು ನದಿ ಈಜಿ ಲೈನ್ ಎತ್ತಿ ಸರಿಪಡಿಸಿ ಕೊಟ್ಟ ಘಟನೆ ಜು.12 ರಂದು ನಢೆದಿದೆ.

ಗುಂಡಡ್ಕದ ಸೀತಮ್ಮ ಎಂಬವರ ಮನೆಗೆ ವಿದ್ಯುತ್ ಸಂಪರ್ಕವಿದ್ದು ಮೂರು ದಿನಗಳ ಹಿಂದೆ ವಿದ್ಯುತ್ ಲೈನ್ ತುಂಡಾಗಿ ನದಿಗೆ ಬಿದ್ದಿತ್ತು.
ಸಾಕಷ್ಟು ನೀರು ಹರಿಯುತಿದ್ದ ಕಾರಣ ಲೈನ್ ಪುನರ್ ಜೋಡಿಸಲು ಹರಸಾಹಸ ಪಡಬೇಕಿತ್ತು. ಇದಕ್ಕೆ ಸಹಕರಿಸಿದ ಸುಬ್ರಹ್ಮಣ್ಯ ಐನೆಕಿದು ಸೊಸೈಟಿ ನಿರ್ದೇಶಕ ಸೋಮಶೇಖರ ಕಟ್ಟೆಮನೆ ಅವರು ನದಿಯಲ್ಲಿ ಈಜಿ ಲೈನ್ ನ್ನು ಎತ್ತಿ ಕೊಟ್ಟಿದ್ದಾರೆ. ಮೆಸ್ಕಾಂ ನ ನಿತ್ಯಾನಂದ ಎಲ್ಲಪಡ್ಕ ವಿಜಯ್, ಪ್ರಶಾಂತ್, ದಿನೇಶ್ ಕಲ್ಕುದಿ ಸಹಕರಿಸಿದ್ದಾರೆ.