ಪುತ್ತೂರಿನಲ್ಲಿ ರಿಕ್ಷಾ ಚಾಲಕರಾಗಿದ್ದ ದೊಡ್ಡತೋಟ ಬಳಿಯ ಸಿಡ್ಲುಕಜೆ ದಿ. ವೆಂಕಟ್ರಮಣ ಗೌಡ ಎಂಬವರ ಪುತ್ರ ಸತೀಶ್ ಎಂಬವರು ಜ್ವರದಿಂದ ಇಂದು ಮುಂಜಾನೆ ನಿಧಾನರಾದರು. ಅವರಿಗೆ 46 ವರ್ಷ ಪ್ರಾಯವಾಗಿತ್ತು.















ಸತೀಶ್ ಅವರು ಮಂಗಳೂರಿನ ಹೆಸರಾಂತ ಜಾದುಗಾರ ಕುದ್ರೋಳಿ ಗಣೇಶ್ ಅವರೊಂದಿಗೆ ಸುಮಾರು 15 ವರ್ಷಗಳಷ್ಟು ಕಾಲ ಕಲಾವಿದನಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಕಳೆದ ಕೆಲ ಸಮಯಗಳಿಂದ ಪುತ್ತೂರಿನಲ್ಲಿ ರಿಕ್ಷಾ ಬಾಡಿಗೆ ನಡೆಸುತ್ತಿದ್ದರು. ಅವರಿಗೆ ವಾರದ ಹಿಂದೆ ಜ್ವರ ಬಂದ ಬಂದಿತ್ತು. ಅದಕ್ಕೆ ಔಷಧಿಯನ್ನು ಪಡೆದುಕೊಂಡಿದ್ದರು. ಜ್ವರ ಸರಿಯಾಗಿ ವಾಸಿಯಾಗಿರದ ಕಾರಣ ನಿನ್ನೆ ಪರೀಕ್ಷೆ ನಡೆಸಿ ಔಷಧಿ ಪಡೆದುಕೊಂಡು ಅವರ ಪುತ್ತೂರಿನ ಮನೆಗೆ ಬಂದಿದ್ದರು. ನಿನ್ನೆ ರಾತ್ರಿ ಔಷಧಿ ಕುಡಿದು ಮಲಗಿದವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಹರಿಣಾಕ್ಷಿ, ಪುತ್ರಿ ಯುತಿಕ, ಸಹೋದರ ಅಮರ ಮೂಡನೂರು ಗ್ರಾಮ ಪಂಚಾಯತ್ ಸಿಬ್ಬಂದಿ ಹರೀಶ್ ಸಿಡ್ಲುಕಜೆ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ. ಸತೀಶ್ ಅವರ ಅಂತಿಮ ಸಂಸ್ಕಾರ ಸಿಡ್ಲುಕಜೆ ಮನೆಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.










