ಏನೇಕಲ್ಲು ರೈತ ಯುವಕ ಮಂಡಲ ನೂತನ ಅಧ್ಯಕ್ಷರಾಗಿ ಜೀವಿತ್ ಪರಮಲೆ

0

ಕಾರ್ಯದರ್ಶಿಯಾಗಿ ಅಶೋಕ್ ಕುಮಾರ್ ಅಂಬೆಕಲ್ಲು, ಖಜಾಂಜಿಯಾಗಿ ಹರಿಪ್ರಸಾದ್ ಮಾದನಮನೆ

ರೈತ ಯುವಕ ಮಂಡಲ ಏನೇಕಲ್ಲು ಇದರ ವಾರ್ಷಿಕ ಮಹಾಸಭೆಯ ಜು.15 ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಮನುದೇವ್ ಪರಮಲೆ ವಹಿಸಿದ್ದರು. ವೇದಿಕೆಯಲ್ಲಿ ರೈತ ಯುವಕ ಮಂಡಲ ಕಟ್ಟಡ ರಚನಾ ಸಮಿತಿಯ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ, ಉಪಾಧ್ಯಕ್ಷ ಶಿವರಾಮ್ ಚಿಧ್ಗಲ್ ಉಪಸ್ತಿತರಿದ್ದರು,

ಸಭೆಯಲ್ಲಿ ಜೀವಿತ್ ಪರಮಲೆ ಅವರನ್ನು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕೌಶಿಕ್ ಕಲ್ಕುಧಿ, ಕಾರ್ಯದರ್ಶಿಯಾಗಿ ಅಶೋಕ್ ಕುಮಾರ್ ಅಂಬೆಕಲ್ಲು, ಜತೆ ಕಾರ್ಯದರ್ಶಿಯಾಗಿ ನಿತೀಶ್ ಪರಮಲೆ, ಖಜಾಂಜಿಯಾಗಿ ಹರಿಪ್ರಸಾದ್ ಮಾದನಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಪುಷ್ಯರಾಜ್ ಚಳ್ಳಂಗಾರು, ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಆದಿತ್ಯ ಮಾದನಮನೆ ಇವರುಗಳನ್ನು ಆಯ್ಕೆ ಮಾಡಲಾಯಿತು.

ನಿರ್ಗಮಿತ ಅಧ್ಯಕ್ಷರಾದ ಮನುದೇವ್ ಪರಮಲೆ, ನೂತನ ಅಧ್ಯಕ್ಷರಾದ ಜೀವಿತ್ ಪರಮಲೆ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. .

ಕಾರ್ಯಕ್ರಮದಲ್ಲಿ ಕಟ್ಟಡ ಸಮಿತಿಯ ಕಾರ್ಯದರ್ಶಿ ವಿಜಯ್ ಕುಮಾರ್ ಅಮೈ, ಖಜಾಂಜಿಯಾಗಿರುವ ನಾಗರಾಜ್ ಪರಮಲೆ, ಸದಸ್ಯರಾಗಿರುವ ಪ್ರಶಾಂತ್ ದೋಣಿಮನೆ, ಕುಮಾರ ಪುರ್ಲುಪ್ಪಾಡಿ, ಶಿವಪ್ರಸಾದ್ ಮಾದನಮನೆ, ಚಂದ್ರಶೇಖರ್ ನಾಯರ್ , ಯುವಕ ಮಂಡಲದ ಸದಸ್ಯರಾದ ಕೌಶಿಕ್ ಕೋಟಿಮನೆ, ಚರಣ್ ಸಂಕಡ್ಕ, ಲವೀನ್ ಕೋಟಿಮನೆ, ರಕ್ಷಿತ್ ಪರಮಲೆ, ಪ್ರಣಾಮ್ ಕೆಬ್ಬೋಡಿ, ಮೋಕ್ಷಿತ್ ಕುಕ್ಕಪ್ಪನಮನೆ ಮತ್ತು ಊರಿನವರು ಉಪಸ್ತಿತರಿದ್ದರು.
ಸಾತ್ವಿಕ್ ಚಿಧ್ಗಲ್ ಸ್ವಾಗತಿಸಿ, ಹರಿಪ್ರಸಾದ್ ಮಾದನಮನೆ ವಂದಿಸಿದರು.