ಸುಳ್ಯದಲ್ಲಿ ಸಂಪನ್ನಗೊಂಡ ಎಸ್‌ವೈಎಸ್ ಸೌಹಾರ್ದ ಸಂಚಾರ

0

ಪರಸ್ಪರ ಕೈ ಕೈ ಹಿಡಿದು ಸೌಹಾರ್ದ ಹೆಜ್ಜೆ ಇಟ್ಟ ಸರ್ವ ಧರ್ಮೀಯರು

ಕರ್ನಾಟಕ ರಾಜ್ಯ (ಎಸ್ ವೈ ಎಸ್) ಸುನ್ನಿ ಯುವ ಜನ ಸಂಘ ವತಿಯಿಂದ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷ ವಾಖ್ಯದೊಂದಿಗೆ ಕುಂದಾಪುರ ದಿಂದ ಸುಳ್ಯವರೆಗೆ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದ ಸಂಚಾರ ನಡಿಗೆಯ ಸಮಾರೋಪ ಸಮಾರಂಭ ಜು 16 ರಂದು ಸುಳ್ಯದಲ್ಲಿ ಬಹಳ ವಿಜೃಂಭಣೆಯಿಂದ ನಡೆದು ಸಮಾಪನ ಗೊಂಡಿತು.

ಕಾರ್ಯಕ್ರಮದ ಅಂಗವಾಗಿ ಸುಳ್ಳದ ಖಾಸಗಿ ಬಸ್ ನಿಲ್ದಾಣ ಬಳಿಯಿಂದ ಗಾಂಧಿನಗರದವರೆಗೆ ಸೌಹಾರ್ದ ನಡಿಗೆಯನ್ನು ಆಯೋಜಿಸಲಾಗಿತ್ತು.
ಕುಂದಾಪುರ ದಿಂದ ಬಂದ ಜಾಥಾ ಸಂಜೆ 5 ಗಂಟೆಗೆ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿಗೆ ತಲುಪುತಿದ್ದಂತೆ
ಜಾಥಾದಲ್ಲಿ ಆಗಮಿಸಿದ ಎಸ್ ವೈ ಎಸ್ ರಾಜ್ಯ ಸಮಿತಿಯ ಮುಖಂಡರುಗಳಿಗೆ ಸುಳ್ಯ ಸ್ವಾಗತ ಸಮಿತಿಯ ಚೆರ್ಮೆನ್ ಮೊಹಮ್ಮದ್ ಕುಂಞಿ ಗೂನಡ್ಕ ಹೂಗುಚ್ಛ ನೀಡಿ ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಸಂತ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ನಾಥ್ ಜಿ, ಬೆಳ್ತಂಗಡಿ ಪ್ರಾಂತ್ಯದ ಚರ್ಚ್ ಧರ್ಮಗುರುಗಳು ಫಾದರ್ ಆದರ್ಶ ಜೋಸೆಫ್, ಸೈಯದ್ ತಂಙಳ್ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರುಗಳು ಹಾಗೂ ಸಾಮಾಜಿಕ ಮುಖಂಡರುಗಳು ಸುಳ್ಯ ಖಾಸಗಿ ಬಸ್ಸು ನಿಲ್ದಾಣ ಬಳಿ ಯಿಂದ ಗಾಂಧಿನಗರದ ವರೆಗೆ ಕೈ ಕೈ ಹಿಡಿದು ಸೌಹಾರ್ದತೆಯ ಹೆಜ್ಜೆಯನ್ನಿಟ್ಟರು.

ಈ ಸಂದರ್ಭದಲ್ಲಿ ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರುಗಳು ಇವರೊಂದಿಗೆ ಸಾಥ್ ನೀಡಿದರು.
ಸುರಿಯುತ್ತಿರುವ ಮಳೆಯ ನಡುವೆಯೂ ಶಿಸ್ತು ಬದ್ದ ವಾಗಿ ಜಾಥಾವು ಮುಖ್ಯ ರಸ್ತೆಯಲ್ಲಿ ಸಾಗಿ ಬಂದು
ಗಾಂಧಿನಗರ ಪೆಟ್ರೋಲ್ ಬಂಕ್ ಬಳಿ ಸಮಾಪ್ತಿಗೊಂಡಿತು.

ಬಳಿಕ ಸಮಾರೋಪ ಸಮಾರಂಭ ಸಭೆ ನಡೆದು ಗಣ್ಯರಿಂದ ಸೌಹಾರ್ದ ಸಂದೇಶ ಭಾಷಣ ನಡೆಯಿತು.

ಎಸ್ ವೈ ಎಸ್ ರಾಜ್ಯ ಸಮಿತಿ ಮಾಜಿ ಅಧ್ಯಕ್ಷ ಹಾಫಿಲ್ ಸಅದಿ ಪ್ರಾಸ್ತವಿಕ ಮಾತನಾಡಿ ಕಾರ್ಯಕ್ರಮ ದ ಕುರಿತು ಮಾಹಿತಿ ನೀಡಿದರು.

ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಮೋಂಟುಗುಳಿ ಯವರು ಮುಖ್ಯ ಭಾಷಣ ನಡೆಸಿ ಮಾತನಾಡಿ ‘ಕರಾವಳಿ ಕರ್ನಾಟಕದಲ್ಲಿ ಕೋಮು ವೈಷಮ್ಯವು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೌಹಾರ್ದ ಸಂದೇಶಗಳನ್ನು ಹರಡುವ ಸಲುವಾಗಿ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಧ್ಯೇಯ ವಾಕ್ಯದೊಂದಿಗೆ ‘ಸೌಹಾರ್ದ ಸಂಚಾರ’ ಎಂಬ ಕಾರ್ಯಕ್ರಮನ್ನು ಹಮ್ಮಿಕ್ಕೊಂಡಿದೆ. ಕುಂದಾಪುರದಿಂದ ಚಾಲನೆಗೊಂಡು ಕಾರ್ಕಳ, ಉಡುಪಿಯಾಗಿ ಹಾದು ಬಂದು ಸುಳ್ಯದಲ್ಲಿ ಸಂಪನ್ನ ಗೊಂಡಿದ್ದು ಸುಳ್ಯದ ಜನತೆ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ನೀಡಿದ ಸಹಕಾರಕ್ಕೆ ನಾವು ಧನ್ಯರಾಗಿದ್ದೇವೆ ಎಂದರು. ಕುಂದಾಪುರದಿಂದ ಸುಳ್ಯ ತನಕ ಸರ್ವ ಮತೀಯರೂ ಜೊತೆಗೂಡಿ ಸಾಗಿದ ಈ ಸಂಚಾರವು ಇಸ್ಲಾಮಿನ ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡಲು ಸಾಧ್ಯವಾಗಿದೆ. ಸೌಹಾರ್ದ ಸಂಚಾರದಲ್ಲಿ ಸಾದಾತುಗಳು,ಉಲಮಾಗಳು,ಉಮರಾಗಳು,ಸ್ವಾಮೀಜಿಗಳು,ಫಾದರ್‌ಗಳು, ವಿವಿಧ ಪಕ್ಷದ ರಾಜಕೀಯ ನಾಯಕರುಗಳು,ಸಾಮಾಜಿಕ – ಧಾರ್ಮಿಕ ಮುಖಂಡರು ಗಳು,ಅಧಿಕಾರಿಗಳು ಒಟ್ಟಾಗಿ ಹೆಜ್ಜೆ ಯನ್ನು ಹಿಡುವ ಮೂಲಕ ನಮ್ಮ ನೆಲವು ಸೌಹಾರ್ದತೆಯ ಬೀಡು ಎಂಬ ಸಂದೇಶವನ್ನು ಜಗಕ್ಕೆ ಸಾರಿದ್ದಾರೆ.ಆದ್ದರಿಂದ ಎಷ್ಟೇ ಕಷ್ಟ ನೋವುಗಳು ಬಂದರೂ ನಮ್ಮನಡುವೆ ಯಾರೇ ಎಷ್ಟೇ ಕಂದಕ ನಿರ್ಮಿಸಲು ಪ್ರಯತ್ನಿಸಿದರೂ ನಾವು ಗಳು ಎದೆಗುಂದದೆ ಸೌಹಾರ್ದತೆ, ಸಾಮರಸ್ಯವನ್ನು ಕಾಪಾಡೋಣ ಎಂದು ಸಂದೇಶ ನೀಡಿದರು.

ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಬಶೀರ್ ಸ ಅದಿ ಪೀಣ್ಯ ಅಧ್ಯಕ್ಷತೆ ವಹಿಸಿದ್ದರು.

ಫಾಧರ್ ಆದರ್ಶ ಜೋಸೆಫ್ ರವರು ಮಾತನಾಡಿ ಯಾವುದೇ ಧರ್ಮವೂ ದ್ವೇಷ ವನ್ನು ಕಲಿಸುವುದಿಲ್ಲ.ಆಯಾ ಧರ್ಮದ ನಿಯಮಗಳನ್ನು ಅವರ ರವರು ಸರಿಯಾಗಿ ಪಾಲಿಸಿಕ್ಕೊಂಡು ಬಂದರೆ ಸಮಾಜದಲ್ಲಿ ಯಾವುದೇ ಅಶಾಂತಿ ಉಂಟಾಗುವುದಿಲ್ಲ.

ರಾಜಕೀಯದವರು ಕೇವಲ ರಾಜಕೀಯದ ಬಗ್ಗೆ ಮಾತ್ರ ಚಿಂತಿಸಬೇಕು.ಅದು ಬಿಟ್ಟು ಅವರು ಧರ್ಮದ ಬಗ್ಗೆ ಬಂದರೆ ಅಥವಾ ಅಲ್ಲಿ ಧರ್ಮವನ್ನು ಬೆರೆಸಿದರೆ ಅಲ್ಲಿ ಕಲಹ ಉಂಟಾಗಲು ಕಾರಣ ವಾಗುತ್ತದೆ.ಆದ್ದರಿಂದ ಸೌಹಾರ್ದ ಎಂಬುದು ಮೊದಲು ನಮ್ಮ ಮನದಿಂದ ಬೆಳೆದರೆ ಬಳಿಕ ಅದು ನಮ್ಮ ಮನೆ ಬಳಿಕ ಸಮಾಜ ಬಳಿಕ ಜಿಲ್ಲೆ ರಾಜ್ಯ ದೇಶ ಜಗತ್ತು ಈಗೆ ಬೆಳೆಯುತ್ತಾ ಹೋಗಲು ಕಾರಣ ವಾಗುತ್ತದೆ ಎಂದರು.

ಹಿಂದೂ ಧರ್ಮದ ಮುಖಂಡರಾದ ರಾಜೇಶ್ ನಾಥ್ ಜಿ ಯವರು ಈ ಸಂಧರ್ಭದಲ್ಲಿ ಮಾತನಾಡಿ ‘ಭಾರತ ಸರ್ವ ಧರ್ಮಗಳ ದೇಶ.ಇಲ್ಲಿ‌ ನೆಲೆಸಿರುವ ಎಲ್ಲರೂ ಸಮಾನರೆಂಬುದು ಸಂವಿದಾನದ ಮೂಲಭೂತ ಆಶಯ.ಸಂವಿದಾನದ ಆಶಯಕ್ಕೆ ಧಕ್ಕೆಯಾಗದಂತೆ ಜೀವನ ನಡೆಸ ಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.ಈ ಸೌಹಾರ್ದ ನಡಿಗೆ ಕಾರ್ಯಕ್ರಮ ದಕ್ಷಿಣ ಕನ್ನಡದಲ್ಲಿ ಶಾಂತಿ ಸಾಮರಸ್ಯ ನೆಲೆಸಲು ಪೂರಕವಾಗಿದ್ದು ಎಲ್ಲಾ ಧರ್ಮಗಳೂ ಸಮಾಜದಲ್ಲಿ ಶಾಂತಿಯನ್ನೇ ಬಯಸುತ್ತವೆ. ಧರ್ಮದ ತಿರುಳು ಅರಿತು ಜೀವನ ನಡೆಸುವುದನ್ನು ಕಲಿತಾಗ ಸೌಹಾರ್ದತೆ ತನ್ನಿಂತಾನೇ ನೆಲೆಸುತ್ತದೆ ಎಂದು ಸೌಹಾರ್ದ ಸಂದೇಶ ನೀಡಿದರು.
ಕುಕ್ಕೆ ಸುಭ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಇಂಜಿಲಾಡಿಯವರು ಮಾತನಾಡಿ ಈ ಒಂದು ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ.ನಮ್ಮ ಜಿಲ್ಲೆಯ ಹಿತಿಹಾಸದಲ್ಲಿಯೇ ಸೌಹಾರ್ದತೆ ನಡೆದು ಬಂದಿದೆ.ಓರ್ವ ಬಪ್ಪ ಬ್ಯಾರಿ ಎಂಬ ಮುಸ್ಲಿಂ ವ್ಯಕ್ತಿಗೆ ದೇವರು ಪ್ರತ್ಯಕ್ಷ ಗೊಂಡು ದೇವಸ್ಥಾನ ನಿರ್ಮಿಸಲು ಬಯಸಿದ್ದು ಹಾಗೂ ಅದು ಪೂರ್ಣ ಗೊಂಡದ್ದು, ಇಂದಿಗೂ ಆಚಾರಗಳು ನಡೆಯುತ್ತಿರುವುದು ಎಲ್ಲರೂ ತಿಳಿದಿರುವ ಸಂಗತಿ ಯಾಗಿದೆ ಎಂದು ಜಿಲ್ಲೆಯ ಕೆಲವು ಸೌಹಾರ್ದ ಇತಿಹಾಸವನ್ನು ಪ್ರಸ್ತಾಪಿಸಿ ಮಾತನಾಡಿದರು.

ಎಸ್ ವೈ ಎಸ್ ರಾಜ್ಯ ನಾಯಕ ಅಬ್ದುರ್ರಶೀದ್ ಝೈನಿ ಕಾಮಿಲ್,ಸುಳ್ಯ ಕಾಯರ್ತೋಡಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಎಂ ವೆಂಕಪ್ಪ ಗೌಡರು, ಜೆ ಡಿ ಎಸ್ ರಾಜ್ಯ ಉಪಾಧ್ಯಕ್ಷ ಎಂ ಬಿ ಸದಾಶಿವ ಹಾಗೂ ಇನ್ನಿತರ ಗಣ್ಯರುಗಳು ಮಾತನಾಡಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಎಸ್ ವೈ ಎಸ್ ರಾಜ್ಯ ಉಪಾಧ್ಯಕ್ಷರು ಗಳಾದ ಸಯ್ಯಿದ್ ಇಲ್ಯಾಸ್ ತಂಙಳ್ ಎಮ್ಮೆಮಾಡು,ಸಯ್ಯಿದ್ ಶಾ ಫೀ ನಈಮೀ ತಂಙಳ್, ಸಯ್ಯಿದ್ ಹಾಮಿಮ್ ತಂಙಳ್ ಚಿಕ್ಕ ಮಂಗಳೂರು,ಇಬ್ರಾಹಿಂ ಸಖಾಫಿ ಪಯೋಟ,ಇಸ್ಹಾಖ್ ಝುಹ್ರಿ ಕಾನಕೆರೆ,ಮಹ್ಬೂಬ್ ಸಖಾಫಿ ಕಿನ್ಯ,ಅಶ್ರಫ್ ಸಖಾಫಿ ಮೂಡಡ್ಕ,ಸಿರಾಜುದ್ದೀನ್ ಸಖಾಫಿ ಕನ್ಯಾನ,ಅಶ್ರಪ್ ಎಮ್ಮೆಮಾಡು,ಇಬ್ರಾಹಿಂ ಮೂಡಿಗೆರೆ,ನವಾಝ್ ಸಖಾಫಿ ಅಡ್ಯಾರ್,ಅಬ್ದುಲ್ಲ ಮುಸ್ಲಿಯಾರ್ ಬೊಳ್ಮಾರ್,ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ಕರೀಂ ಬೊಳಂತೂರು ಮೊದಲಾದವರು ಉಪಸ್ಥಿತರಿದ್ದರು.

ಸುಳ್ಯದ ಮುಖಂಡರುಗಳಾದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು, ಪಿ.ಎಸ್.ಗಂಗಾಧರ, ಕೆ.ಗೋಕುಲ್‌ದಾಸ್, ಇಕ್ಬಾಲ್ ಎಲಿಮಲೆ, ಡಾ.ಸುಂದರ ಕೇನಾಜೆ, ಬೆಟ್ಟ ಜಯರಾಮ ಭಟ್,ರಾಮ ಚಂದ್ರ ಪೆಲತ್ತಡ್ಕ ಶಾಫಿ ಕುತ್ತಮೊಟ್ಟೆ, ಸಿದ್ದಿಕ್ ಕೊಕ್ಕೊ, ಶಾಹುಲ್ ಹಮೀದ್ ಕುತ್ತಮೊಟ್ಟೆ, ರಾಜು ಪಂಡಿತ್,ನಂದರಾಜ ಸಂಕೇಶ್, ಭವಾನಿಶಂಕರ ಕಲ್ಮಡ್ಕ,ಮೊದಲಾದವರು ಸೌಹಾರ್ದ ಸಂಚಾರ ಯಾತ್ರೆ ಯಲ್ಲಿ ಭಾಗವಹಿಸಿ ಸಮಾರೋಪ ಸಮಾರಂಭ ದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಚೆಯರ್‌ಮೆನ್ ಮಹಮ್ಮದ್ ಕುಂಞಿ ಗೂನಡ್ಕ ಅಭಿನಂದನಾ ಭಾಷಣ ಮಾಡಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಹಳಿದರು.

ಸಮಿತಿಯ
ವೈಸ್ ಚೆಯರ್‌ಮೆನ್ ಕೆ.ಎಂ.ಮುಸ್ತಫ ಜನತಾ ಸ್ವಾಗತಿಸಿ ರಾಜ್ಯ ಸಮಿತಿ ಮುಖಂಡ ಹಸೈನಾರ್ ಆನೆಮಅಲ್ ಕಾರ್ಯಕ್ರಮ ನಿರೂಪಿಸಿದರು.
ಜನರಲ್ ಕನ್ವೀನರ್ ಅಡ್ವಕೆಟ್ ಅಬೂಬಕ್ಕರ್ ಅಡ್ಕಾರ್ ವಂದಿಸಿದರು.

ವೈಸ್ ಚೆರ್ಮೆನ್ ಹಮೀದ್ ಬೀಜ ಕೊಚ್ಚಿ, ಫಿನಾನ್ಸ್ ಸೆಕ್ರೆಟರಿ ಮೂಸಾ ಕುಂಞಿ ಪೈಂಬೆಚ್ಚಾಲ್,ವೈಸ್ ಕನ್ವೀನರ್ ಅಬ್ದುಲ್ ಹಮೀದ್ ಸುಣ್ಣಮೂಲೆ,
ಕೋ-ಆರ್ಡಿನೆಟರ್ ಸಿದ್ದೀಕ್ ಗೂನಡ್ಕ,ಎಸ್‌ವೈಎಸ್ ವಲಯ ಅಧ್ಯಕ್ಷ ಅಬ್ದುಲ್ ಲತೀಫ್ ಝೌಹರಿ, ಎಸ್‌ವೈಎಸ್ ಜಿಲ್ಲಾ ಕ್ಯಾಬಿನೆಟ್ ಸದಸ್ಯ ಹಸೈನಾರ್ ವಳಲಂಬೆ,ನ ಪಂ ಸದಸ್ಯ ಶರೀಫ್ ಕಂಠಿ,ಹಿರಿಯರಾದ ಅಬೂಬಕ್ಕರ್ ಜಟ್ಟಿ ಪಳ್ಳ, ಮಾಧ್ಯಮ ಪ್ರತಿನಿಧಿ ಶರೀಫ್ ಜಟ್ಟಿಪಳ್ಳ, ಹಸೈನಾರ್ ಜಯನಗರ ಮೊದಲಾದವರು ಸಹಕರಿಸಿದರು.
ಸಮಿತಿಯ ಪದಾಧಿಕಾರಿ ಹಾಗೂ ನ ಪಂ ಸದಸ್ಯ ಕೆ ಎಸ್ ಉಮ್ಮರ್ ಕಾಲ್ನಡಿಗೆ ಜಾಥಾದ ನೇತೃತ್ವ ವಹಿಸಿ ಅಚ್ಚುಕಟ್ಟಾಗಿ ನೆರವೇರಿಸಿ ದರು.ಎಸ್ ವೈ ಎಸ್ ಇಸಾಬ ತಂಡದ ಸದಸ್ಯರು ಸಹಕರಿಸಿದರು.