ಇನ್ನೂ ಎಚ್ಚೆತ್ತುಕೊಳ್ಳದ ಇಲಾಖೆ : ಅಪಾಯ ಸಂಭವಿಸಿದರೆ ಯಾರು ಹೊಣೆ?









ಅಜ್ಜಾವರ ಅಂಗನವಾಡಿ ಕಟ್ಟಡದ ಎದುರುಗಡೆ ಇರುವ ಅಜ್ಜಾವರ ಪ್ರಾಥಮಿಕ ಶಾಲೆಗೆ ಸೇರಿರುವ ಸಮೂಹ ಸಂಪನ್ಮೂಲ ಕೇಂದ್ರವು ಬಹಳ ಹಳೆಯ ಕಟ್ಟಡವಾಗಿದ್ದು ಶಿಥಿಲಾವಸ್ಥೆಯಲ್ಲಿದೆ. ಈ ಕಟ್ಟಡದ ಸಮೀಪದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಸುಮಾರು 30ಕ್ಕಿಂತ ಹೆಚ್ಚು ಪುಟ್ಟ ಮಕ್ಕಳು ಇದ್ದಾರೆ. ಅಪಾಯಕಾರಿ ಕಟ್ಟಡದಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಅಜ್ಜಾವರ ಗ್ರಾ.ಪಂ. ಸದಸ್ಯ ರವಿರಾಜ್ ಕರ್ಲಪ್ಪಾಡಿ ತಿಳಿಸಿದ್ದಾರೆ.

ಕಟ್ಟಡ ಶಿಥಿಲಾವಸ್ಥೆ ಕುರಿತು ಈಗಾಗಕೇ ಅಜ್ಜಾವರ ಗ್ರಾಮ ಆಡಳಿತಾಧಿಕಾರಿ ಅವರಲ್ಲಿ ದೂರಿಕೊಂಡಿದ್ದೇವೆ. ಅವರು ತಹಶೀಲ್ದಾರ್ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ. ಆದರೆ ಇದುವರೆಗೂ ಏನೂ ಕ್ರಮ ಕೈಗೊಂಡಿಲ್ಲ ಅಂತ ಮಕ್ಕಳ ಪೋಷಕರ ಅಳಲು ತೋಡಿಕೊಳ್ಳುತ್ತಿದ್ದಾರೆ. ಪುಟ್ಟ ಮಕ್ಕಳು ಓಡಾಡು ಜಾಗದ ಪಕ್ಕದಲ್ಲೇ ಅಪಾಯಕಾರಿ ಕಟ್ಟಡ ಇದೆ. ಅಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ










