








ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಧೀನದಲ್ಲಿರುವ ಶ್ರೀ ಪಾಷಾಣ ಮೂರ್ತಿ ಅಮ್ಮನವರ ಸ್ಥಾನಕ್ಕೆ ಆಲೆಟ್ಟಿ ಗ್ರಾಮಸ್ಥರಿಂದ ೧೦೦ ಪೈಬರ್ ಚಯರ್ ಹಾಗೂ ೨ ಸ್ಟೀಲ್ ಟೇಬಲ್ ಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಇದರ ನೇತೃತ್ವ ವಹಿಸಿರುವ ತೀರ್ಥಕುಮಾರ್ ಕುಂಚಡ್ಕ, ಮುತ್ತಪ್ಪ ಪೂಜಾರಿ ಮೊರಂಗಲ್ಲು, ರಾಮಚಂದ್ರ ಆಲೆಟ್ಟಿ ಇವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಶಾಲು ಹೊದಿಸಿ ಫಲಪುಷ್ಪ, ಪ್ರಸಾದ ನೀಡಿ ಗೌರವಿಸಿದರು. ಇವರೊಂದಿಗೆ ರತ್ನಾಕರ ಕುಡೆಕಲ್ಲು, ಸತ್ಯಪ್ರಸಾದ್ ಗಬ್ಬಲ್ಕಜೆ ಮತ್ತು ಆಲೆಟ್ಟಿ ಗ್ರಾಮದ ಪ್ರಮುಖರು, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.










