ದೇವಮ್ಮ ಮಾವಜಿಯವರ ವೈಕುಂಠ ಸಮಾರಾಧನೆ, ಶ್ರದ್ಧಾಂಜಲಿ ಕಾರ್ಯಕ್ರಮ

0

ಅಜ್ಜಾವರ ಗ್ರಾಮದ ಬಾಲಕೃಷ್ಣ ಮಾವಜಿಯವರ ಪತ್ನಿ ಶ್ರೀಮತಿ ದೇವಮ್ಮ ಮಾವಜಿಯವರು ಜೂನ್ 30ರಂದು ನಿಧರರಾಗಿದ್ದು, ಅವರ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮವು ಸುಳ್ಳದ ಭಂಟರ ಭವನದಲ್ಲಿ ಜುಲೈ 16ರಂದು ನಡೆಯಿತು.

ಸದಾನಂದ ಮಾವಜಿಯವರು ಅತಿಥಿಗಳನ್ನು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.
ಚಂದ್ರಶೇಖರ ಪೇರಾಲ್ ರವರು ದೇವಮ್ಮ ರವರ ಬಗ್ಗೆ ನುಡಿನಮನ ಸಲ್ಲಿಸಿದರು.
ಮೃತರ ಹಿತೈಷಿಗಳು, ಬಂಧುಗಳು, ಗಣ್ಯರು ಉಪಸ್ಥಿತರಿದ್ದು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.