ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವ ಹಿಂದೂ ಪರಿಷತ್ ,ಬಜರಂಗದಳ ಮಾತೃ ಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡದ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ಆಶ್ರಯದಲ್ಲಿ ಆ.19 ರಂದು ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತುಶೋಭಾಯಾತ್ರೆಯ ಆಮಂತ್ರಣ ಪತ್ರ ಬಿಡುಗಡೆಯು ಜು.20 ರಂದು ಚೆನ್ನಕೇಶವ ದೇವಸ್ಥಾನದ ಎದುರಿನಲ್ಲಿ ನಡೆಯಿತು.
















ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಚೆನ್ನಕೇಶವ ದೇವರಿಗೆ ಪೂಜೆಯನ್ನು ಸಲ್ಲಿಸಿದ ಬಳಿಕ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ಯವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ಗೌರವಾಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ,ಅಧ್ಯಕ್ಷ ಬಾಲಚಂದ್ರ ಅಡ್ಕಾರ್, ವಿ.ಹೆಚ್.ಪಿ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್,ಉಪಾಧ್ಯಕ್ಷರಾದ ಹರಿಪ್ರಸಾದ್ ಸುಲಾಯ, ಸೋಮಶೇಖರ ಪೈಕ, ಮಾತೃಶಕ್ತಿ ಸಂಯೋಜಕಿ ರೀನಾಚಂದ್ರಶೇಖರ, ದುರ್ಗಾವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ, ವ್ಯವಸ್ಥಾ ಪ್ರಮುಖ್ ಉಪೇಂದ್ರ ನಾಯಕ್, ವರ್ಷಿತ್ ಚೊಕ್ಕಾಡಿ, ಪ್ರಕಾಶ್ ಯಾದವ್ ಮೇನಾಲ, ಬಜರಂಗದಳ ಸಂಯೋಜಕ್ ಹರಿಪ್ರಸಾದ್ ಎಲಿಮಲೆ, ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಕಾರ್ಯದರ್ಶಿ ಪಾರ್ವತಿ ಕುಂಚಡ್ಕ, ಸಹ ಕಾರ್ಯದರ್ಶಿ ಮಿಥುನ್ ಪಾಡಾಜೆ, ನವೀನ್ ಎಲಿಮಲೆ,ಹಿಂದೂ ಮುಖಂಡರಾದ ಮನೋಜ್ ಕಡಬ, ವಿನಯ್ ಕುಮಾರ್ ಕಂದಡ್ಕ, ಸುಭೋದ್ ಶೆಟ್ಟಿ ಮೇನಾಲ, ಕುಸುಮಾಧರ ಎ.ಟಿ, ಗಿರೀಶ್ ಕಲ್ಲುಗದ್ದೆ, ಮನೋಜ್ ಸುಳ್ಯ, ಜನಾರ್ದನ ದೋಳ, ಸತೀಶ್ ಟಿ.ಎನ್, ದೇವಿಪ್ರಸಾದ್ ಅತ್ಯಾಡಿ, ಪ್ರಭೋದ್ ಶೆಟ್ಟಿ ಮೇನಾಲ, ವಿನಯ್ ಪಾಡಾಜೆ, ಪುನೀತ್ ಸಂಕೇಶ ಹಾಗೂ ಸಂಘಟನೆಯ ಕಾರ್ಯಕರ್ತರು, ಮಾತೃ ಶಕ್ತಿ,ದುರ್ಗಾವಾಹಿನಿಯ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.
ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿದರು. ನವೀನ್ ಎಲಿಮಲೆ ವಂದಿಸಿದರು.










